alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್‌ ಖರೀದಿಸಲು ಬಾತ್ ಟಬ್ ತುಂಬ ನಾಣ್ಯ ತಂದ ಭೂಪ…!

ಆಪಲ್‌ ನೊಂದಿಗಿನ ಕಾನೂನು ಸಮರವನ್ನು ನಾಣ್ಯಗಳ ಮೂಲಕ ಇತ್ಯರ್ಥಗೊಳಿಸಿದ್ದು ನೆನಪಿದೆಯೇ? ಈಗ, ರಷ್ಯಾದ ವ್ಯಕ್ತಿಯೊಬ್ಬ ಹೊಸ ಐಫೋನ್ ಎಕ್ಸ್ ಎಸ್ ಖರೀದಿಸಲು ಆಪಲ್ ಮಳಿಗೆಯೊಂದಕ್ಕೆ ಹೋದ.

ಕೈಯಲ್ಲಿ ನೋಟು ಇರಲಿಲ್ಲ, ಕಾರ್ಡ್ ಇರಲಿಲ್ಲ, ಬದಲಾಗಿ ಬಾತ್ ಟಬ್‌ ನಲ್ಲಿ ಪೂರ್ತಿ ತುಂಬಿದ ನಾಣ್ಯಗಳಿದ್ದವು! ಫೇಸ್‌ಬುಕ್ ಬಳಕೆರಾರೊಬ್ಬರು ಆಪಲ್ ಕಚೇರಿಯಲ್ಲಿ ನಾಣ್ಯ ತುಂಬಿದ ಬಾತ್‌ ಟಬ್‌ ಇರುವ ಫೊಟೋವನ್ನು ಶೇರ್ ಮಾಡಿದ್ದಾರೆ.

ಆಪಲ್ ಮಳಿಗೆಯ ಉದ್ಯೋಗಿಯೊಬ್ಬರು ತಾಳ್ಮೆಯಿಂದ ಕುಳಿತು ಆ ನಾಣ್ಯಗಳನ್ನೆಲ್ಲಾ ಲೆಕ್ಕ ಹಾಕಿದರು. ಆ ಟಬ್‌ನಲ್ಲಿ 1,00,000 ರೂಬಲ್‌ಗಳಿದ್ದವು. ಹೊಸ ಐಫೋನ್ ಎಕ್ಸ್ ಎಸ್ ಖರೀದಿಸಲು ಅದು ಸಾಕಾಗುವಷ್ಟಿತ್ತು ಎಂದು ಆಪಲ್ ವಕ್ತಾರೆ ಲಿಡ್‌ಮಿಲಾ ಸೆಮುಶಿನಾ ಹೇಳಿದ್ದಾರೆ.

ಗ್ರಾಹಕ ಆಧಾರಿತ ಆಗಿರುವುದು ಎಂದರೇನು? ಗ್ರಾಹಕ, ಹೈಪ್ ಮಾಡಲು ಬಯಸಿ ಐಫೋನ್ ಖರೀದಿಸಲು ಬಾತ್ ಟಬ್‌ನಲ್ಲಿ ನಾಣ್ಯ ತುಂಬಿ ಮಳಿಗೆಗೆ ತಂದಿದ್ದ. ನಮ್ಮ ಸಿಬ್ಬಂದಿ ತಾಳ್ಮೆಯಿಂದ ಅದನ್ನು ಎಣಿಸಿದರು. ಅದರ ಎಣಿಕೆಗೆ 2 ಗಂಟೆಗಳು ತಗುಲಿದವು ಎಂದು ಸೆಮುಶಿನಾ ಹೇಳಿದ್ದಾರೆ.

ಆ ನಾಣ್ಯಗಳ ತೂಕವೇ 350 ಕಿಲೋ ಇತ್ತು. ನಾಲ್ಕೈದು ಮಂದಿ ಆ ಟಬ್ ಅನ್ನು ಹೊತ್ತು ತಂದಿದ್ದರು. ಆ ಗ್ರಾಹಕ ಟಬ್‌ಗೆ ನಾಣ್ಯ ತುಂಬಿ ಮಳಿಗೆಗೆ ಹೊತ್ತು ತಂದ ತನ್ನ ಸಾಹಸದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ. ನೀವೂ ನೋಡಿ ಈ ಹುಚ್ಚು ಸಾಹಸ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...