alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳ ನೀಡಿದ್ದ ಸಂಸದನಿಂದ ಕ್ಷಮೆ ಯಾಚನೆ

ಮಹಿಳಾ ದಿನದಂದು ರಷ್ಯಾದ ಸಂಸತ್ ಸದಸ್ಯನೊಬ್ಬನಿಗೆ ತನ್ನ ತಪ್ಪಿನ ಅರಿವಾಗಿದೆ. ಹಲವು ಮಹಿಳಾ ಪತ್ರಕರ್ತರು ಆತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಿನ್ನೆ ತಾನು ಮಾಡಿದ ತಪ್ಪಿಗೆ ಆತ ಕ್ಷಮೆ ಕೇಳಿದ್ದಾನೆ.

ರಷ್ಯಾದ ಸಂಸತ್ ಸದಸ್ಯ ಲಿಯೊನಿಡ್ ಸ್ಲಟ್ಸ್ಕಿ ಪತ್ರಕರ್ತೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಅವರನ್ನು ಬಲವಂತವಾಗಿ ಬರಸೆಳೆದುಕೊಳ್ಳುವುದು, ಅಶ್ಲೀಲ ಕಮೆಂಟ್ ಮಾಡೋದು, ಅಸಹ್ಯಕರವಾದ ಬೇಡಿಕೆಗಳನ್ನಿಡೋದು ಅವನಿಗೆ ಅಭ್ಯಾಸವಾಗಿ ಹೋಗಿತ್ತು.

ಆತನ ವರ್ತನೆ ಬಗ್ಗೆ ವರದಿಗಾರ್ತಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಮಹಿಳಾ ದಿನವಾದ ಇಂದು ತನ್ನನ್ನು ಕ್ಷಮಿಸಿಬಿಡಿ ಅಂತಾ ಲಿಯೊನಿಡ್ ಫೇಸ್ಬುಕ್ ನಲ್ಲಿ ಕೇಳಿಕೊಂಡಿದ್ದಾನೆ. ತನ್ನ ಉದ್ದೇಶ ದುರುದ್ದೇಶಪೂರ್ವಕವಾಗಿರಲಿಲ್ಲ ಎಂದಿದ್ದಾನೆ. ಇದಕ್ಕೂ ಮುನ್ನ ಲಿಯೊನಿಡ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಕೂಡ ನಡೆದಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...