alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಸಮಾಧಿ ಮೇಲೆ ಐಫೋನ್ ನೆಟ್ಟ ತಂದೆ…! ಕಾರಣವೇನು ಗೊತ್ತಾ…?

ರಷ್ಯಾದ ಉಫಾ ನಗರದ ರೀಟಾ ಶಮೀವಾಗೆ ಆಗಿನ್ನೂ ಇನ್ನೂ 25ರ ಹರೆಯ. 2016ರ ಜನವರಿಯಲ್ಲಿ ಆಕೆ ಮೃತಪಟ್ಟಳು. ಆದರೆ ಇಂದು ಆಕೆಯ ತಂದೆ, ಮಗಳ ನೆನಪಲ್ಲಿ ಆಕೆಯ ಸಮಾಧಿ ಮೇಲೆ ಐಫೋನ್ ರೂಪದ ಗೋರಿಕಲ್ಲು ನೆಟ್ಟಿದ್ದಾರೆ.

ಆಳೆತ್ತರದ ಕಂದುಬಣ್ಣದ ಅಗ್ನಿಶಿಲೆಯನ್ನು ಖರೀದಿಸಿದ ಅಪ್ಪ ಅದನ್ನು ಥೇಟ್ ಐಫೋನ್‌ 7 ನಂತೆ ಕೆತ್ತಿಸಿದ್ದಾರೆ. ಹೋಮ್ ಬಟನ್, ಮುಂಭಾಗ ಮತ್ತು ಹಿಂಭಾಗದ ಕ್ಯಾಮರಾಗಳು, ಲೈಟ್ ಸೆನ್ಸರ್‌ಗಳು ಹಾಗೂ ಎಲ್‌ಇಡಿ ಫ್ಲಾಶ್‌ನಂತೆ ಕೂಡ ಕೆತ್ತನೆ ಮಾಡಲಾಗಿದೆ. ಅಷ್ಟೇ ಅಲ್ಲ, ಸ್ಕ್ರೀನ್ ಸೇವರ್ ಆಗಿ ಮೃತ ರೀಟಾಳ ಚಿತ್ರವನ್ನೂ ಹೊಂದಿದೆ. ಜತೆಗೆ ಆಕೆಯ ಹೆಸರು ಮತ್ತು ಜನನ ಹಾಗೂ ಮರಣ ದಿನಾಂಕಗಳನ್ನೂ ಬರೆಯಲಾಗಿದೆ.

ಸೈಬಿರೀಯಾದ ಕಲಾವಿದ ಪಾವೆಲ್ ಕಾಲ್ಯುಕ್ ಇದನ್ನು ವಿನ್ಯಾಸಗೊಳಿಸಿದ್ದಾನೆ. 2016ರಲ್ಲಿ ಈ ಐಫೋನ್ ವಿನ್ಯಾಸದ ಗೋರಿಕಲ್ಲುಗಳು ಆರಂಭಗೊಂಡಿದ್ದವು. ರಷ್ಯಾದಲ್ಲಿ ಇದೀಗ ಜನಪ್ರಿಯಗೊಳ್ಳುತ್ತಿದೆ. ಈ ಕಲಾವಿದನ ಕೈಯಲ್ಲಿ ಗೋರಿಕಲ್ಲನ್ನು ಐಫೋನ್ ಮಾದರಿಯಲ್ಲಿ ತಯಾರಿಸಿಕೊಂಡು ತಮ್ಮ ಪ್ರೀತಿಪಾತ್ರರ ಸಮಾಧಿ ಮೇಲೆ ನೆಡುತ್ತಿದ್ದಾರೆ. ಇತರೆ ಸಮಾಧಿಗಳ ಮಧ್ಯೆ ಇದು ಭಿನ್ನವಾಗಿ ನಿಂತು ಎದ್ದುಕಾಣುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...