alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟಿನ್ ಪುತ್ರಿಯಿಂದ ದೂರವಾಗಿದ್ದಕ್ಕೆ ಕರಗಿ ಹೋಯ್ತು ‘ಉದ್ಯಮಿ’ಯ ಆಸ್ತಿ…!

32ರ ಹರೆಯದ ಉದ್ಯಮಿ ಕಿರಿಲ್ ಶಮಲೋವ್ 2013ರಲ್ಲಿ ವ್ಲಾಡಿಮಿರ್ ಪುಟಿನ್ ರ ಪುತ್ರಿಯನ್ನು ಮದುವೆಯಾಗಿದ್ರು. ಆಗ ದಿಢೀರನೆ ಅವರ ಅದೃಷ್ಟ ಖುಲಾಯಿಸಿತ್ತು. ಷೇರು ಉದ್ಯಮದಲ್ಲೇ 2 ಬಿಲಿಯನ್ ಡಾಲರ್ ಆಸ್ತಿ ಸಂಪಾದಿಸಿದ್ದರು ಕಿರಿಲ್. ಅಷ್ಟೇ ಅಲ್ಲ ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ಬಹುದೊಡ್ಡ ಉದ್ಯಮಿ ಅನ್ನೋ ಖ್ಯಾತಿಯನ್ನೂ ಗಳಿಸಿದ್ದರು.

ಆದ್ರೆ ಪುಟಿನ್ ಪುತ್ರಿ ಕಟೆರಿನಾ ಟಿಖೋನೋವಾ ಹಾಗೂ ಕಿರಿಲ್ ಬೇರೆಯಾಗಿದ್ದಾರೆ ಅನ್ನೋ ಸುದ್ದಿ ಹರಡುತ್ತಿದ್ದಂತೆ ದಿಢೀರ್ ಬದಲಾವಣೆಗಳಾಗಿವೆ. ಕಿರಿಲ್ ಅವರನ್ನು ಉನ್ನತ ಹುದ್ದೆಯಿಂದ ತೆಗೆದುಹಾಕಿ ಡಿಮೋಶನ್ ಮಾಡಲಾಗಿದೆ. ಅವರ ಆಸ್ತಿ ಕೂಡ ಅರ್ಧದಷ್ಟಾಗಿದೆ.

ಪುಟಿನ್ ಪುತ್ರಿ ಹಾಗೂ ಉದ್ಯಮಿ ಕಿರಿಲ್ ವಿಚ್ಛೇದನ ಪಡೆಯುತ್ತಿರುವುದು ಖಚಿತವಾಗಿದೆ. ಯಾಕಂದ್ರೆ ಲಂಡನ್ ನ ಝಾನ್ನಾ ವೊಲ್ಕೋವಾ ಎಂಬ ಯುವತಿಯ ಜೊತೆಗೆ ಕಿರಿಲ್ ಕಾಣಿಸಿಕೊಂಡಿದ್ದಾರೆ. ಆಕೆ ಪುಟಿನ್ ಅಳಿಯನ ಹೊಸ ಗರ್ಲ್ ಫ್ರೆಂಡ್ ಅಂತಾ ಹೇಳಲಾಗ್ತಿದೆ. ಝಾನ್ನಾ ಜೊತೆಗಿನ ಫೋಟೋವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಕಿರಿಲ್, ಐ ಲವ್ ಯೂ ಅಂತಾನೂ ಬರೆದುಕೊಂಡಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...