alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ, ಬ್ರೆಜಿಲ್ ಎಲೆಕ್ಷನ್ ಮೇಲೆ ರಷ್ಯಾ ರಹಸ್ಯ ಕಣ್ಣು

ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಾಮಾಜಿಕ ಜಾಲತಾಣಗಳ ಪರಿಣತರು ಭಾರತ ಮತ್ತು ಬ್ರೆಜಿಲ್ ನ ಮೀಡಿಯಾಗಳನ್ನ ರಷ್ಯಾ ಟಾರ್ಗೆಟ್ ಮಾಡಬಹುದಾದ ಸಂಭವ ಇದೆ ಅಂತ ತಿಳಿಸಿದ್ದಾರೆ. ಚುನಾವಣೆಗಳ ಸಂದರ್ಭದಲ್ಲಿ ರಷ್ಯಾ, ಭಾರತದ ಮಾಧ್ಯಮಗಳ ಮೇಲೆ ನಿಗಾ ಇಡಬಹುದಾದ ಸಂಭವವಿದೆ ಅಂತ ತಜ್ಞರು ಹೇಳ್ತಿದ್ದಾರೆ.

ಇದಕ್ಕೆ ಅವರು ಕೊಡ್ತಿರೋ ಕಾರಣ ಏನು ಗೊತ್ತಾ…? ಭಾರತ ಮತ್ತು ಬ್ರೆಜಿಲ್ ನ ಮಾಧ್ಯಮಗಳು ಪ್ರಭಾವಿ ಮತ್ತು ವೃತ್ತಿಪರವಾಗಿ ಕೆಲಸ ಮಾಡೋದಿಲ್ಲ ಅನ್ನೋ ಸಬೂಬನ್ನು ರಷ್ಯಾ ಹೇಳ್ತಿದೆಯಂತೆ. ಈ ಬಗ್ಗೆ ರಷ್ಯಾದ ಗುಪ್ತಚರ ಇಲಾಖೆ ವಿದೇಶಿ ಇಲಾಖೆಗೆ ಬೇಕಾದ ಪೂರಕ ಮಾಹಿತಿಯನ್ನ ಒದಗಿಸುತ್ತಿದೆಯಂತೆ. ಭಾರತದ ಸಾಮಾಜಿಕ ಜಾಲತಾಣಗಳ ಮೇಲೆ ವಿದೇಶಿ ಪ್ರಭಾವ ಇರುವ ಕಾರಣ ರಷ್ಯಾಗೆ ಹೆಚ್ಚು ಅಡ್ವಾನ್ಟೇಜ್ ಇದೆ ಅಂತ ಪರಿಣಿತರು ತಿಳಿಸಿದ್ದಾರೆ.

ಭಾರತ ಮತ್ತು ಬ್ರೆಜಿಲ್ ನ ಚುನಾವಣಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ವಿಚಾರದಲ್ಲಿ ರಷ್ಯಾ ಹಸ್ತಕ್ಷೇಪದ ಸಂಭವ ಹೆಚ್ಚಾಗಬಹುದು ಅಂತ ಅಮೆರಿಕಾದ ಪರಿಣಿತರು ಕೂಡ ಈ ಹಿಂದೆ ಅಭಿಪ್ರಾಯಪಟ್ಟಿದ್ದರು. ಹಾಗಾಗಿ ರಷ್ಯಾದ ಚಲನವಲನಗಳ ಮೇಲೆ ಅಮೆರಿಕಾ ಒಂದು ಕಣ್ಣಿಟ್ಟಿದೆಯಂತೆ.

2016ರಲ್ಲಿ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ವೇಳೆಯೂ ರಷ್ಯಾ, ಅಮೆರಿಕದ ಸಾಮಾಜಿಕ ಜಾಲತಾಣದ ವಿಚಾರದಲ್ಲಿ ತಲೆ ಹಾಕಿತ್ತು. ರಷ್ಯಾದ ಡಾರ್ಕ್ ವೆಬ್ ಪರಿಣಿತರು ಈಗಾಗ್ಲೇ ಈ ಕೆಲಸದಲ್ಲಿ ನಿಯೋಜಿತರಾಗಿದ್ದಾರೆ ಅಂತಾ ಅಮೆರಿಕದ ಗುಪ್ತಚರ ಸಂಸ್ಥೆಗೆ ಮಾಹಿತಿ ಇದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...