alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರೆನೇಡ್ ಕೈಯಲ್ಲಿಡಿದು ಸೆಲ್ಫಿ, ನಂತರ ನಡೆದಿದ್ದೇನು…?

ಕೈಯಲ್ಲಿ ಗ್ರೆನೇಡ್ ಹಿಡಿದು ಫೋಟೋಗೆ ಪೋಸ್ ಕೊಡಲು ಹೋಗಿ ರಷ್ಯಾದಲ್ಲಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ಅಲೆಕ್ಸಾಂಡರ್ ಸಾಶಾ ಚೆಚಿಕ್ ತನ್ನ ಸ್ನೇಹಿತನಿಗೆ ವಾಟ್ಸಾಪ್ ಮೆಸೇಜ್ ಕಳಿಸಿದ್ದ. ಕೈಯಲ್ಲಿ ಗ್ರೆನೇಡ್ ಹಿಡಿದುಕೊಂಡಿರೋ ಫೋಟೋ ಸೆಂಡ್ ಮಾಡಿದ್ದ.

ಅದನ್ನು ನೋಡಿ ಅಚ್ಚರಿಗೊಂಡ ಸ್ನೇಹಿತ ಎಲ್ಲವೂ ಸರಿಯಾಗಿದೆಯಾ ಅಂತಾ ಪ್ರಶ್ನಿಸಿದ್ದಾನೆ. ಅಂದರೆ ಏನರ್ಥ ಅಂತಾ ಅಲೆಕ್ಸಾಂಡರ್ ಮೆಸೇಜ್ ಮಾಡಿದ್ದ. ಎಲ್ಲಿದ್ದೀಯಾ ಅಂತಾ ಸ್ನೇಹಿತ ಕಳಿಸಿದ ಮೆಸೇಜ್ ಗೆ ರಿಪ್ಲೈ ಬಂದಿರಲಿಲ್ಲ.

ಹ್ಯಾಂಡ್ ಗ್ರೆನೇಡ್ ನ ಪಿನ್ ಹೊರಬಂದಿತ್ತು. ಅದನ್ನು ಒಳಕ್ಕೆ ಸೇರಿಸಲು ಅಲೆಕ್ಸಾಂಡರ್ ಪ್ರಯತ್ನಿಸಿದ್ದಾನೆ, ಆದ್ರೆ ಸಾಧ್ಯವಾಗಿಲ್ಲ. ಗ್ರೆನೇಡ್ ಸ್ಫೋಟಿಸಿದೆ, ಅಲೆಕ್ಸಾಂಡರ್ ದೇಹ ಎರಡು ತುಂಡಾಗಿ ಬಿದ್ದುಕೊಂಡಿತ್ತು. ಇದು ಆತ್ಮಹತ್ಯೆಯಾ ಎಂಬ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗ್ರೆನೇಡ್ ದೂರಕ್ಕೆ ಎಸೆದರೆ ಮಾತ್ರ ಸ್ಫೋಟಗೊಳ್ಳುತ್ತದೆ ಎಂದು ಅಲೆಕ್ಸಾಂಡರ್ ಭಾವಿಸಿರಬಹುದು. ಹಾಗಾಗಿಯೇ ಗ್ರೆನೇಡ್ ಪಿನ್ ಅನ್ನು ಹೊರಕ್ಕೆಳೆದು ಅನಾಹುತ ಮಾಡಿಕೊಂಡಿದ್ದಾನೆ ಅಂತಾ ಶಂಕಿಸಲಾಗಿದೆ. ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಬಗ್ಗೆಯೂ ಅನುಮಾನ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...