alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರಿಗುಂಟು ಯಾರಿಗಿಲ್ಲ…? 15 ರೂಪಾಯಿಗೆ ಹೆಲಿಕ್ಯಾಪ್ಟರ್ ರೈಡ್

ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. 15 ರೂಪಾಯಿಗೆ ಹೆಲಿಕ್ಯಾಪ್ಟರ್ ರೈಡ್ ಅನ್ನೋ ವಿಡಿಯೋ ಈಗ ಟ್ರಾಲ್ ಕೂಡ ಆಗ್ತಿದೆ. ಹೆಲಿಕ್ಯಾಪ್ಟರ್ ನ ಬಾಗಿಲಿನಲ್ಲಿ ನಿಂತು ಬಸ್ ಗೆ ಜನರನ್ನು ಕರೆಯುವಂತೆ ವ್ಯಕ್ತಿಯೊಬ್ಬ ಜನರನ್ನು ಕರೆಯುವ ವಿಡಿಯೋ ನೋಡುಗರಲ್ಲಿ ನಗೆ ಬುಗ್ಗೆ ಚಿಮ್ಮಿಸುತ್ತೆ.

ಪಾಕಿಸ್ತಾನದ ನೂತನ ಮಾಹಿತಿ ಸಚಿವ ಫಹಾದ್ ಚೌಧರಿ ಇತ್ತೀಚೆಗಷ್ಟೆ ಪಾಕಿಸ್ತಾನದ ಪ್ರಜೆಗಳಿಗೆ ಹೆಲಿಕ್ಯಾಪ್ಟರ್ ಪ್ರಯಾಣ ಪ್ರತಿ ಕಿಲೋಮೀಟರ್ಗೆ 55 ರೂಪಾಯಿ ಆಗುತ್ತದೆ ಅನ್ನೋ ಹೇಳಿಕೆ ಕೊಟ್ಟಿದ್ದರು. ಇತ್ತೀಚೆಗಷ್ಟೆ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಇಮ್ರಾನ್ ಖಾನ್ ತಮ್ಮ ಮನೆಯಿಂದ ಪಾಕಿಸ್ತಾನದ ಶಾಸಕಾಂಗ ಸಭೆಗೆ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದ್ದರು. ಆ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್ಗೆ ಖರ್ಚಾಗಿದ್ದು ಕೇವಲ 50-55 ರೂಪಾಯಿ ಅನ್ನೋದನ್ನ ಹೇಳಿದ್ದರು.

ಈ ಹೇಳಿಕೆ ಈಗ ಪಾಕಿಸ್ತಾನದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ಜನರು ಸಚಿವರ ಹೇಳಿಕೆಯನ್ನ ಟ್ರೋಲ್ ಮೂಲಕವೇ ಟೀಕೆಗೆ ಒಳಪಡಿಸ್ತಿದ್ದಾರೆ. ಹ್ಯಾಷ್ ಟ್ಯಾಗ್ ಗಳ ಮೂಲಕ ಫಹಾದ್ ಚೌಧರಿ ಅವರನ್ನ ಗೇಲಿ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...