alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟನ್ ರಾಜ ಕುಟುಂಬದಲ್ಲಿ ನಡೆಯುತ್ತಿದೆ ಮೊದಲ ಗೇ ಮದುವೆ

ಬ್ರಿಟನ್ ರಾಜ ಕುಟುಂಬದಲ್ಲಿ ಮೊದಲ ಬಾರಿ ಗೇ ಮದುವೆ ನಡೆಯುತ್ತಿದೆ. ಕ್ವೀನ್ ಎಲೆಜಬೆತ್ 2 ಸಹೋದರ ಲಾರ್ಡ್ ಐವಾರ್ ಮೌಂಟ್ಬ್ಯಾಟನ್ ತಮ್ಮ ಸಲಿಂಗಕಾಮಿ ಸಂಗಾತಿ ಜೊತೆ ಮದುವೆಯಾಗ್ತಿದ್ದಾರೆ.

ಡೈಲಿ ಮೇಲ್ ವರದಿ ಪ್ರಕಾರ ಎರಡು ವರ್ಷಗಳ ಹಿಂದೆಯೇ ಲಾರ್ಡ್ ಐವಾರ್ ಮೌಂಟ್ಬ್ಯಾಟನ್, ಗೇ ಎಂದು ಘೋಷಣೆ ಮಾಡಿದ್ದರು. ಲಾರ್ಡ್ ಐವಾರ್ ಮೌಂಟ್ಬ್ಯಾಟನ್ ಮೊದಲ ಮದುವೆ 24 ವರ್ಷಗಳ ಹಿಂದೆ ಪೆನಿ ಜೊತೆ ನಡೆದಿತ್ತು. ದಾಂಪತ್ಯವನ್ನು ಲಾರ್ಡ್ ಐವಾರ್ ಮೌಂಟ್ಬ್ಯಾಟನ್ ಎಂಜಾಯ್ ಮಾಡ್ತಿರಲಿಲ್ಲ. ಇದು ತಿಳಿದ ಪತ್ನಿ ಈವರೆಗೆ ಲಾರ್ಡ್ ಐವಾರ್ ಮೌಂಟ್ಬ್ಯಾಟನ್ ರಿಗೆ ಬೆಂಬಲ ನೀಡುತ್ತ ಬಂದಿದ್ದರು.

ಎಂಟು ವರ್ಷಗಳ ಹಿಂದೆ ಲಾರ್ಡ್ ಐವಾರ್ ಮೌಂಟ್ಬ್ಯಾಟನ್ ಪತ್ನಿಗೆ ವಿಚ್ಛೇದನ ನೀಡಿದ್ದರು. 2016 ರಲ್ಲಿ ಗೇ ಎಂಬ ಸಂಗತಿಯನ್ನು ಎಲ್ಲರ ಮುಂದೆ ಹೇಳಿದ್ದರು. ಈಗ 56 ವರ್ಷದ ಜೇಮ್ಸ್ ಕೋಯಲ್ ಜೊತೆ ಲಾರ್ಡ್ ಐವಾರ್ ಮೌಂಟ್ಬ್ಯಾಟನ್ ಮದುವೆಯಾಗಲಿದ್ದಾರೆ. ಖಾಸಗಿ ಸಮಾರಂಭದಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ. ಈ ಮದುವೆಗೆ ಪೆನಿ ಕೂಡ ಬರಲಿದ್ದಾರೆ ಎನ್ನಲಾಗಿದೆ. ಲಾರ್ಡ್ ಐವಾರ್ ಮೌಂಟ್ಬ್ಯಾಟನ್ ರಿಗೆ ಮೂರು ಮಕ್ಕಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...