alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ಸಾಹಸಿಯ ದುರಂತ ಸಾವಿನ ದೃಶ್ಯ

ಬೀಜಿಂಗ್: ಡೆಡ್ಲಿ ಸ್ಟಂಟ್ ಮಾಡುವುದರಲ್ಲಿ ನಿಷ್ಣಾತನಾಗಿದ್ದ ಯುವಕನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಚೀನಾದ ಹುವಾನ್ ಪ್ರಾಂತ್ಯದಲ್ಲಿ ನಡೆದಿದೆ.

ವು ಯಾಂಗ್ ನಿಂಗ್(26) ಮೃತಪಟ್ಟ ಯುವಕ. ಡೇರ್ ಡೆವಿಲ್ ಸ್ಟಂಟ್ ಗಳಿಗೆ ಹೆಸರುವಾಸಿಯಾಗಿದ್ದ ವು ಯಾಂಗ್ ನಿಂಗ್ ಕಟ್ಟಡವೊಂದರ 62 ನೇ ಮಹಡಿಯಿಂದ ಆಯತಪ್ಪಿ ಬಿದ್ದು ಸಾವು ಕಂಡಿದ್ದಾನೆ.

ಎತ್ತರದ ಕಟ್ಟಡಗಳು, ಸೇತುವೆಗಳ ಮೇಲೆ ಸ್ಟಂಟ್ ಮಾಡುವ ವು ಯಾಂಗ್ ನಿಂಗ್ ನೆರೆದಿದ್ದ ಜನರ ಸಮ್ಮುಖದಲ್ಲಿ ಡ್ಯಾನ್ಸ್ ಮಾಡುವಾಗ ಕೈ ಜಾರಿದೆ. ನೋಡ ನೋಡುತ್ತಿದ್ದಂತೆಯೇ ಅವರು ಕೆಳಗೆ ಬಿದ್ದಿದ್ದಾರೆ.

ಆತನ ಸಾಹಸದ ದೃಶ್ಯಗಳು ಮತ್ತು ಆಯತಪ್ಪಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...