alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಟ್ಟ ಮಾತಿಗೆ ತಪ್ಪದ ರೋಹಿತ್ ಶರ್ಮಾ

ಮೊಹಮ್ಮದ್ ನೀಲಂ ಶ್ರೀಲಂಕಾ ಮೂಲದವನು. ಆದ್ರೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಅಂದ್ರೆ ನೀಲಂಗೆ ಅಚ್ಚುಮೆಚ್ಚು. ನೀಲಂ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ತಂದೆಗೆ ಕ್ಯಾನ್ಸರ್ ಇರುವ ವಿಷಯ ಗೊತ್ತಾಗಿತ್ತು. ಮರಳಿ ಲಂಕಾಗೆ ತೆರಳಲು ಆತನ ಬಳಿ ಹಣವಿರಲಿಲ್ಲ.

ರೋಹಿತ್ ಶರ್ಮಾ ಕೂಡಲೇ ನೀಲಂಗೆ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದರು. ಕೊಲಂಬೋಗೆ ಬಂದಾಗ ಭೇಟಿಯಾಗುವುದಾಗಿ ಭರವಸೆ ಕೂಡ ನೀಡಿದ್ದರು. ರೋಹಿತ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಕಳೆದ ಶುಕ್ರವಾರ ಕೊಲಂಬೋದಲ್ಲಿರುವ ನೀಲಂ ಮನೆಗೆ ಭೇಟಿ ನೀಡಿದ್ದಾರೆ.

ರೋಹಿತ್ ಶರ್ಮಾರ ಸರಳತೆ ಹಾಗೂ ಪರೋಪಕಾರಿ ಮನೋಭಾವ ನೋಡಿ ನೀಲಂ ಕೂಡ ಭಾವುಕರಾದ್ರು. ಟೀಂ ಇಂಡಿಯಾ ಹಾಗೂ ರೋಹಿತ್ ಶರ್ಮಾ ಬಗೆಗಿನ ತಮ್ಮ ಅಭಿಮಾನ ಎಂದಿಗೂ ಬದಲಾಗುವುದೇ ಇಲ್ಲ ಎನ್ನುತ್ತಾರೆ ಮೊಹಮ್ಮದ್ ನೀಲಂ.

ಸುಧೀರ್ ಗೌತಮ್, ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ. ಅದೇ ರೀತಿ ಮೊಹಮ್ಮದ್ ನೀಲಂಗೆ ಕೂಡ ರೋಹಿತ್ ಅಂದ್ರೆ ಪಂಚಪ್ರಾಣ. ತಮ್ಮ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿರೋ ಕ್ರಿಕೆಟ್ ಪ್ರೇಮಿಗೆ ಅಲ್ಪ ಸಹಾಯ ಮಾಡಿದ್ದು ರೋಹಿತ್ ಶರ್ಮಾಗೂ ಸಾರ್ಥಕ ಭಾವ ಮೂಡಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...