alex Certify
ಕನ್ನಡ ದುನಿಯಾ       Mobile App
       

Kannada Duniya

ಮನಕಲಕುವಂತಿದೆ ರೋಹಿಂಗ್ಯಾ ನಿರಾಶ್ರಿತರ ಫೋಟೋ

ಮಯನ್ಮಾರ್ ನಲ್ಲಿ ಬೌದ್ಧ ಜನ ಸಮೂಹ ಮತ್ತು ಸೇನೆಯಿಂದ ನಲುಗಿ ಹೋಗಿರುವ ರೋಹಿಂಗ್ಯಾ ಮುಸ್ಲಿಮರು ದೇಶವನ್ನು ತೊರೆದು ಬಾಂಗ್ಲಾಕ್ಕೆ ವಲಸೆ ಬರುತ್ತಿದ್ದಾರೆ. ವಿಶ್ವಸಂಸ್ಥೆ ರೋಹಿಂಗ್ಯಾ ಮುಸ್ಲಿಮರನ್ನು ವಿಶ್ವದಲ್ಲೇ ಅತ್ಯಂತ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತರು ಎಂದು ಹೇಳಿದೆ.

ಹಿಂಸಾಚಾರದಿಂದ ನಲುಗಿದ ಸುಮಾರು 6 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರು ದೇಶವನ್ನು ತೊರೆದು ಬಾಂಗ್ಲಾ ಗಡಿಯಲ್ಲಿ ನೆಲೆಸಿದ್ದಾರೆ.

ಮಯನ್ಮಾರ್ ನಿಂದ ಬಾಂಗ್ಲಾಕ್ಕೆ ವಿವಿಧ ರೀತಿಯಲ್ಲಿ ರೋಹಿಂಗ್ಯಾ ಮುಸ್ಲಿಮರು ವಲಸೆ ಹೋಗುತ್ತಿದ್ದಾರೆ. ಅದರಲ್ಲಿ ಆಯಿಲ್ ಕ್ಯಾನ್, ಡ್ರಮ್ ಗಳ ಸಹಾಯದಿಂದ ಸಮುದ್ರದಲ್ಲಿ ಈಜಿಕೊಂಡು ಹೋಗುವುದು ಒಂದಾಗಿದೆ.

ಜೀವವನ್ನು ಉಳಿಸಿಕೊಳ್ಳಲು ಜೀವವನ್ನೇ ಒತ್ತೆ ಇಟ್ಟು ಆಯಿಲ್ ಕ್ಯಾನ್ ನೆರವಿನೊಂದಿಗೆ ರೋಹಿಂಗ್ಯಾ ಯುವಕರು ಪಲಾಯನ ಮಾಡುವ ಪರಿಸ್ಥಿತಿ ಬಂದೊದಗಿದೆ.

ಈಜು ಬಾರದ 31 ವರ್ಷದ ನಬಿ ಹುಸೇನ್ ಮಯನ್ಮಾರ್ ನ ತನ್ನ ಹಳ್ಳಿಯಿಂದ ಆಯಿಲ್ ಕ್ಯಾನ್ ಸಹಾಯದೊಂದಿಗೆ ತಪ್ಪಿಸಿಕೊಂಡು ಬಂದಿದ್ದಾನೆ. ಸುಮಾರು 2.5 ಮೈಲು ದೂರ ನೀರಿನಲ್ಲಿ ಜೀವ ಉಳಿಸಿಕೊಳ್ಳಲು ಹೋರಾಟ ಮಾಡಿದ್ದಾನೆ. ಇದು ನನ್ನ ಕೊನೆಯ ದಿನವೆಂದು ಭಾವಿಸಿದ್ದೆ. ಆದರೆ, ಬದುಕಿದೆ ಎಂದು ಆತ ಹೇಳಿಕೊಂಡಿದ್ದಾನೆ.

1 ವಾರದ ಅವಧಿಯಲ್ಲಿ 3 ಡಜನ್ ಗೂ ಅಧಿಕ ರೋಹಿಂಗ್ಯಾ ಹುಡುಗರು ಮತ್ತು ಯುವಕರು ಪ್ಲಾಸ್ಟಿಕ್ ಆಯಿಲ್ ಕ್ಯಾನ್ ಹಿಡಿದುಕೊಂಡು ಈಜುತ್ತಾ ಬಾಂಗ್ಲಾ ಕಡೆಗೆ ಬಂದಿದ್ದಾರೆ. ಅವರು ಮಯನ್ಮಾರ್ ನಿಂದ ಪಲಾಯನ ಮಾಡಲು ಆಯಿಲ್ ಕ್ಯಾನ್ ನೆರವಾಗಿವೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...