alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಸ್ಥಳದಲ್ಲಿ ಮಹಿಳೆ ತುಟಿಗೆ ಮುತ್ತಿಟ್ಟ ರಾಷ್ಟ್ರಪತಿ…!

ದಕ್ಷಿಣ ಕೊರಿಯಾ ಅಧಿಕೃತ ಭೇಟಿ ವೇಳೆ ಪಿಲಿಪೈನ್ಸ್ ರಾಷ್ಟ್ರಪತಿ ರೊಡ್ರಿಗೊ ಡಟರ್ಟೆ ಸಾರ್ವಜನಿಕರೆದುರು ಮಹಿಳೆಯೊಬ್ಬಳಿಗೆ ಲಿಪ್ ಕಿಸ್ ನೀಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಡಟರ್ಟೆಯವರನ್ನು ಅನೈತಿಕ ಎಂದು ಕರೆದ್ರೆ ಸಾಮಾಜಿಕ ಜಾಲತಾಣ ಬಳಕೆದಾರರು ಈ ಬಗ್ಗೆ ಹಾಸ್ಯ ಮಾಡ್ತಿದ್ದಾರೆ.

ಮಹಿಳೆಯರ ವಿರುದ್ಧ ದುರುದ್ದೇಶ ಹೊಂದಿದ್ದು ಮಹಿಳೆಯರಿಗೆ ಅವಮಾನ ಮಾಡುವ ಮಾತುಗಳನ್ನು ಡಟರ್ಟೆ ಆಡ್ತಾರೆಂದು ವಿರೋಧಿಗಳು ಕಿಡಿಕಾರಿದ್ದಾರೆ. ಇದನ್ನು ಕೆಲವರು ನಾಟಕ ಎಂದಿದ್ದಾರೆ.

ದಕ್ಷಿಣ ಕೊರಿಯಾ ಪ್ರವಾಸದ ವೇಳೆ ಒಬ್ಬೊಬ್ಬರನ್ನೇ ಭೇಟಿ ಮಾಡಿ ಮಾತನಾಡ್ತಿದ್ದ ರಾಷ್ಟ್ರಪತಿಗಳು ಮಹಿಳೆಯೊಬ್ಬಳ ತುಟಿಗೆ ಮುತ್ತಿಟ್ಟಿದ್ದಾರೆ. ಪುಸ್ತಕ ನೀಡಬೇಕಾದ್ರೆ ಮುತ್ತು ನೀಡಬೇಕು ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ. ರಾಷ್ಟ್ರಪತಿ ಮಾತು ಕೇಳಿ ಉತ್ಸಾಹಗೊಂಡ ವಿವಾಹಿತ ಮಹಿಳೆ ಮುತ್ತು ನೀಡಲು ಒಪ್ಪಿಕೊಂಡಿದ್ದಾಳೆ.

ಮೂರು ಸಾವಿರ ಜನರ ಮುಂದೆ ಮುತ್ತಿಟ್ಟ ಡಟರ್ಟೆ ಇದನ್ನು ಗಂಭೀರವಾಗಿ ಪರಿಗಣಿಸಬೇಡಿ. ಇದು ತಮಾಷೆಗಾಗಿ ಎಂದಿದ್ದಾರೆ. ಮಹಿಳೆ ಹೆಸ್ರು ಬಿ ಕಿಮ್. ಇದ್ರಿಂದ ನನಗೆ ಬೇಸರವಾಗಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಡಟರ್ಟೆ ಮುತ್ತಿನ ವಿಡಿಯೋ, ಫೋಟೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...