alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟೋ ಮೊದಲೇ ಈ ಮಗು ರಾಕ್ ಸ್ಟಾರ್….

womb

ತಾಯ್ತನ ಅನ್ನೋದು ಪ್ರತಿ ಮಹಿಳೆಗೂ ಅತ್ಯಂತ ವಿಶಿಷ್ಟ ಅನುಭವ ಕೊಡುತ್ತದೆ. ಹುಟ್ಟೋ ಮಗುವಿನ ಬಗ್ಗೆ ತಾಯಿಗೆ ಅಗಾಧ ಕುತೂಹಲವಿರುತ್ತದೆ. ಜೊತೆಗೆ ಮಗು ಆರೋಗ್ಯವಾಗಿದೆಯೋ ಇಲ್ಲವೋ ಅನ್ನೋದನ್ನು ತಿಳಿದುಕೊಳ್ಳುವ ತವಕ.

ಹಾಗಾಗಿ ಅಲ್ಟ್ರಾಸೌಂಡ್ ಮೂಲಕ ಗರ್ಭಿಣಿಯರು ಪರೀಕ್ಷೆ ಮಾಡಿಸಿಕೊಳ್ತಾರೆ. ಹೊಟ್ಟೆಯಲ್ಲಿರೋ ಮಗುವನ್ನು ಸ್ಕ್ರೀನ್ ಮೇಲೆ ನೋಡಿ ತಾಯಿ ಸಮಾಧಾನಪಟ್ಟುಕೊಳ್ತಾಳೆ. ತಾಯಿಯ ಹೊಟ್ಟೆಯಲ್ಲಿರುವಾಗ್ಲೇ ಮಗುವೊಂದು ಸಖತ್ ಆಕ್ಷನ್ ಮೂಲಕ ಗಮನ ಸೆಳೆದಿದೆ.

ರಾಕ್ ಸ್ಟಾರ್ ಗಳಂತೆ ಕೈಬೆರಳುಗಳಿಂದ ಆ್ಯಕ್ಷನ್ ಮಾಡಿದೆ. ಮಗುವಿನ ಈ ಚಲನವಲನ ಅಲ್ಟ್ರಾಸೌಂಡ್ ನಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಬಹುಷಃ ಅಮ್ಮನ ಹೊಟ್ಟೆಯಿಂದ ಆಚೆ ಬಂದಮೇಲೆ ಹೇಗೆ ಮಿಂಚುತ್ತೇನೆ ನೋಡಿ ಅನ್ನೋ ಸಂದೇಶವಿದ್ರೂ ಇರಬಹುದು. ಅದೇನೇ ಆದ್ರೂ ಹೊಟ್ಟೆಯಲ್ಲಿರೋ ಮಗುವಿನ ಸಖತ್ ಆ್ಯಕ್ಷನ್ ನೋಡಿ ತಂದೆ ತಾಯಿ ಫುಲ್ ಖುಷಿಯಾಗಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...