alex Certify
ಕನ್ನಡ ದುನಿಯಾ       Mobile App
       

Kannada Duniya

ರೋಬೋಟ್ ಸೋಫಿಯಾಗೆ ಸಿಕ್ತು ಸೌದಿ ನಾಗರಿಕತ್ವ..!

ಮನುಷ್ಯರನ್ನು ಹೋಲುವ ರೋಬೋಟ್ ಸೋಫಿಯಾಗೆ ಸೌದಿ ಅರೇಬಿಯಾ ನಾಗರಿಕತ್ವ ಸಿಕ್ಕಿದೆ. ಸೌದಿ ಅರೇಬಿಯಾ ಮನುಷ್ಯರಂತೆ ರೋಬೋಟ್ ಗೆ ನಾಗರಿಕತ್ವ ನೀಡಿದ ವಿಶ್ವದ ಮೊದಲ ದೇಶವಾಗಿದೆ. ಸೌದಿ ಅರೇಬಿಯಾ ರಾಜಧಾನಿ ರಿಯಾದ್ ನಲ್ಲಿ ಫ್ಯೂಚರ್ ಇನ್ವೆಸ್ಟ್ಮೆಂಟ್ ಇನಿಶಿಯೇಟಿವ್ ವೇದಿಕೆ ಮೇಲೆ ಸೋಫಿಯಾಗೆ ನಾಗರಿಕತೆ ನೀಡಲಾಗಿದೆ.

ಈ ವಿಶೇಷ ಗೌರವ ಪಡೆಯಲು ನನಗೆ ಹೆಮ್ಮೆಯಾಗ್ತಿದೆ. ವಿಶ್ವದ ಇತಿಹಾಸದಲ್ಲಿ ಇದೇ ಮೊದಲ ಬಾರಿ ರೋಬೋಟ್ ಗೆ ನಾಗರಿಕತ್ವ ಸಿಕ್ಕಿದೆ ಎಂದು ಸೋಫಿಯಾ ಹೇಳಿದ್ದಾಳೆ. ಡೇವಿಡ್ ಹ್ಯಾನ್ಸನ್ ಸೋಫಿಯಾ ರೋಬೋಟ್ ನಿರ್ಮಾಣ ಮಾಡಿದ್ದಾನೆ. ಹ್ಯಾನ್ಸನ್ ಹಾಂಗ್ ಕಾಂಗ್ ಹ್ಯಾನ್ಸನ್ ರೋಬೋಟಿಕ್ ನ ಸಂಸ್ಥಾಪಕರಾಗಿದ್ದಾರೆ.

ಹ್ಯಾನ್ಸನ್ ರೋಬೋಟಿಕ್ ಮನುಷ್ಯರನ್ನು ಹೋಲುವ ಹಾಗೂ ಮನುಷ್ಯರಂತೆ ಕೆಲಸ ಮಾಡುವ ರೋಬೋಟ್ ನಿರ್ಮಾಣ ಮಾಡುವುದ್ರಲ್ಲಿ ಹೆಸರು ಮಾಡಿದೆ. ಸೋಫಿಯಾ ಹಾಲಿವುಡ್ ನಟಿ ಆಡ್ರಿ ಹೆಪ್ಬರ್ನ್ ಹೋಲುತ್ತಾಳೆ. ರೋಬೋಟ್ ಸೋಫಿಯಾ ಸದ್ಯ ಸುದ್ದಿಯಲ್ಲಿದ್ದಾಳೆ. ಈಕೆ ಬಗ್ಗೆ ದೊಡ್ಡದೊಂದು ಪ್ರಶ್ನೆ ಉದ್ಭವವಾಗಿದೆ. ಸೌದಿಯಲ್ಲಿ ಮಹಿಳೆಯರಿಗಿಂತ ರೋಬೋಟ್ ಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಯಾಕೆಂದ್ರೆ ಸೋಫಿಯಾ ವೇದಿಕೆ ಮೇಲೆ ಬುರ್ಕಾ ಧರಿಸದೆ ಇಂಗ್ಲೀಷ್ ನಲ್ಲಿ ಮಾತನಾಡಿದ್ದು ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...