alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಸ್ಪೋರ್ಟ್ ತಿರಸ್ಕರಿಸಲು ಇದಂತೆ ಕಾರಣ….

eyes

ನ್ಯೂಜಿಲೆಂಡ್ ನಲ್ಲಿ ಪಾಸ್ಪೋರ್ಟ್ ಪರಿಶೀಲಿಸುವ ರೋಬೋಟ್ ಒಂದು ಜನಾಂಗೀಯ ನಿಂದನೆ ಮಾಡಿದೆ. ಕಣ್ಣುಗಳು ಚಿಕ್ಕದಾಗಿದ್ದು, ಮುಚ್ಚಿಕೊಂಡಂತಿವೆ ಎಂಬ ಕಾರಣಕ್ಕೆ ಏಷ್ಯಾದ ವ್ಯಕ್ತಿಯೊಬ್ಬನ ಪಾಸ್ಪೋರ್ಟ್ ಅನ್ನೇ ತಿರಸ್ಕರಿಸಿದೆ.

22 ವರ್ಷದ ರಿಚರ್ಡ್ ಲೀ ಒಬ್ಬ ವಿದ್ಯಾರ್ಥಿ, ಜೊತೆಗೆ ಡಿಜೆ ಆಗಿಯೂ ಕೆಲಸ ಮಾಡ್ತಿದ್ದಾನೆ. ತನ್ನ ಪಾಸ್ಪೋರ್ಟ್ ನವೀಕರಣಕ್ಕೆ ಲೀ ಮುಂದಾಗಿದ್ದ. ಆದ್ರೆ ಆಂತರಿಕ ವ್ಯವಹಾರಗಳ ಇಲಾಖೆಯ ವೆಬ್ ಸೈಟ್ ನಲ್ಲಿ ಅವನ ಅರ್ಜಿ ತಿರಸ್ಕಾರಗೊಂಡಿತ್ತು.

ಎದುರುಗಡೆ ನೋಡುತ್ತಿರುವ ಫೋಟೋವನ್ನೇ ಲೀ ಅಪ್ ಲೋಡ್ ಮಾಡಿದ್ದ, ಅದರಲ್ಲಿ ಅವನ ಕಣ್ಣುಗಳು ಕೂಡ ಸ್ಪಷ್ಟವಾಗಿ ತೆರೆದೇ ಇವೆ. ಆದ್ರೆ ಲೀ ಫೋಟೋ ನಿಯಮಗಳಿಗೆ ಅನುಗುಣವಾಗಿಲ್ಲ, ಕಣ್ಣುಗಳು ಮುಚ್ಚಿವೆ ಎಂಬ ಕಾರಣ ಕೊಟ್ಟು ನವೀಕರಣ ಅರ್ಜಿಯನ್ನು ರೋಬೋಟ್ ತಿರಸ್ಕರಿಸಿದೆ.

ಬಳಿಕ ಮತ್ತೆ ಲೀ ಮನವಿ ಸಲ್ಲಿಸಲಾಗಿ ಪಾಸ್ಪೋರ್ಟ್ ನವೀಕರಣ ಅರ್ಜಿ ಸ್ವೀಕೃತಗೊಂಡಿದೆ. ರಿಚರ್ಡ್ ಲೀ ಹುಟ್ಟಿದ್ದು ತೈವಾನ್ ನಲ್ಲಿ, ಬೆಳೆದಿದ್ದೆಲ್ಲ ನ್ಯೂಜಿಲೆಂಡ್ ನಲ್ಲಿ. ಈ ಘಟನೆಯಿಂದ ಮನಸ್ಸಿಗೆ ಬೇಸರವಾಗಿಲ್ಲ, ನನ್ನ ಕಣ್ಣುಗಳು ಸ್ವಲ್ಪ ಚಿಕ್ಕದಾಗಿವೆ. ಮುಖ ಗುರುತಿಸುವ ತಂತ್ರಜ್ಞಾನ ಕೂಡ ಅಷ್ಟು ಸೂಕ್ತವಾಗಿಲ್ಲ. ಅದೊಂದು ರೋಬೋಟ್ ಆಗಿರೋದ್ರಿಂದ ಅದರ ಬಗ್ಗೆ ಯಾವುದೇ ಬೇಸರವಿಲ್ಲ ಎಂದಿರುವ ಲೀ, ಕೊನೆಗೂ ಪಾಸ್ಪೋರ್ಟ್ ನವೀಕರಣವಾಯ್ತಲ್ಲ ಅಂತಾ ನಿಟ್ಟುಸಿರು ಬಿಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...