alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯೋದಲ್ಲಿ ಹಾಡಹಗಲೇ ನಡೆಯುತ್ತಿದೆ ರಾಬರಿ

Robbers have field day at Rio; video shows tourists being robbed in broad daylightಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ಒಲಂಪಿಕ್ಸ್ ಆರಂಭವಾಗಿದೆ. ಅಲ್ಲಿರುವ ಅವ್ಯವಸ್ಥೆಗಳ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ಚಿತ್ರ ಸಹಿತ ವರದಿಗಳು ಪ್ರಕಟವಾಗಿದ್ದರ ಬೆನ್ನಲ್ಲೇ ಒಲಂಪಿಕ್ಸ್ ವೀಕ್ಷಿಸಲು ಆಗಮಿಸಿರುವ ಕ್ರೀಡಾಭಿಮಾನಿಗಳನ್ನು ಹಾಡಹಗಲೇ ಜನನಿಬಿಡ ಪ್ರದೇಶಗಳಲ್ಲಿ ದೋಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಒಲಂಪಿಕ್ಸ್ ವೀಕ್ಷಿಸಲು ಆಗಮಿಸಿರುವ ಕ್ರೀಡಾಸಕ್ತರನ್ನು ಹಲವರು ಹಾಡಹಗಲೇ ದೋಚುತ್ತಿದ್ದು, ಇದರಿಂದಾಗಿ ಹಲವರು ಈಗಾಗಲೇ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಯಾವುದೆ ಅಂಜಿಕೆಯಿಲ್ಲದೇ ಪ್ರವಾಸಿಗರನ್ನು ದೋಚಲಾಗುತ್ತಿದೆ.

ರಿಯೋ ಒಲಂಪಿಕ್ಸ್ ಮೇಲೆ ಭಯೋತ್ಪಾದಕರ ಕರಿ ನೆರಳು ಬಿದ್ದಿದೆ ಎನ್ನುವ ಕಾರಣಕ್ಕಾಗಿ ಸುಮಾರು 85 ಸಾವಿರ ಮಂದಿ ಸೇನೆ ಹಾಗೂ ಪೊಲೀಸರು ರಕ್ಷಣೆಯ ವ್ಯವಸ್ಥೆ ಹೊತ್ತಿದ್ದರೂ ದರೋಡೆಯಂತಹ ಹಲವು ಘಟನೆಗಳು ಸಾರ್ವಜನಿಕರ ಸಮ್ಮುಖದಲ್ಲೇ ಹಾಡಹಗಲು ನಡೆದಿದೆ. ಜೊತೆಗೆ ಇಂದು ಪತ್ರಕರ್ತರನ್ನು ಒಲಂಪಿಕ್ ಗ್ರಾಮಕ್ಕೆ ಕರೆದೊಯ್ಯುತ್ತಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆದಿರುವುದೂ ಸುರಕ್ಷತಾ ಕ್ರಮಗಳ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...