alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆಗೆ ಬಂದವನ ಪ್ಯಾಂಟ್ ಉದುರಿ ಹೋದಾಗ….

ದರೋಡೆ ಮಾಡಲೆಂದು ಹೋದ ಕಳ್ಳನೊಬ್ಬ, ತನ್ನ ತಪ್ಪಿನಿಂದ ಪೇಚಿಗೆ ಸಿಲುಕಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಅಮೆರಿಕಾದ ಡೆನ್ವೆರ್ ಪ್ರಾಂತ್ಯದ ಆರೋರಾದ ಅಂಗಡಿಯೊಂದರಲ್ಲಿ ದರೋಡೆಗೆಂದು ಹೋಗಿದ್ದ ಕಳ್ಳನೊಬ್ಬ, ಜೇಬಿನಲ್ಲಿದ್ದ ಗನ್ ತೆಗೆಯುವಾಗ ಎಡವಟ್ಟು ಮಾಡಿಕೊಂಡು ಗನ್ ನ್ನು ಅಂಗಡಿಯ ಸಿಬ್ಬಂದಿಗೆ ಸಿಗುವ ರೀತಿ ಬೀಳಿಸಿಕೊಂಡಿದ್ದಾನೆ.

ಸಿಬ್ಬಂದಿ ಗನ್ ತಗೆದುಕೊಂಡು ಕಳ್ಳನತ್ತ ತೋರಿಸುತ್ತಿದ್ದಂತೆ, ಹೆದರಿ ಅಲ್ಲಿಂದ ಓಟ ಕಿತ್ತಿದ್ದಾನೆ. ಆದರೆ ಓಡುವ ಅವಸರದಲ್ಲಿ ಪ್ಯಾಂಟ್ ಜಾರಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿ ಕ್ಯಾಮೆರಾ ದೃಶ್ಯವನ್ನು ಬಿಡುಗಡೆಗೊಳಿಸಿರುವ ಪೊಲೀಸರು, ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ. ಆದರೆ ಕಳ್ಳತನಕ್ಕೆಂದು ಬಂದ ಕಳ್ಳನ ಪ್ಯಾಂಟ್ ಜಾರಿ ಬಿದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...