alex Certify
ಕನ್ನಡ ದುನಿಯಾ       Mobile App
       

Kannada Duniya

ರಿಷಿ ಕಪೂರ್ ಗೆ ಕಾಡ್ತಿದೆಯಾ ಕ್ಯಾನ್ಸರ್? ವಿಡಿಯೋ ಹಾಕಿದ ನಟ

ಬಾಲಿವುಡ್ ಹಿರಿಯ ಕಲಾವಿದರ ಆರೋಗ್ಯದಲ್ಲಿ ಏರುಪೇರಾಗ್ತಿದೆ. ಇರ್ಫಾನ್ ಖಾನ್, ಸೋನಾಲಿ ಬೇಂದ್ರೆ ನಂತ್ರ ರಿಷಿ ಕಪೂರ್ ಸರದಿ. ರಿಷಿ ಕಪೂರ್ ಆರೋಗ್ಯದಲ್ಲಿ ಏರುಪೇರಾಗಿದೆ. ಅಮೆರಿಕಾದಲ್ಲಿರುವ ರಿಷಿ ಕಪೂರ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ರಿಷಿ ಆರೋಗ್ಯ ತುಂಬಾ ಹದಗೆಟ್ಟಿದೆ ಎಂಬ ಸುದ್ದಿ ಬಂದಿತ್ತು. ಆದ್ರೆ ಭಾನುವಾರ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ರಿಷಿ ಕಪೂರ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಈ ವಿಡಿಯೋದಲ್ಲಿ ರಿಷಿ ಕಪೂರ್ ಜೊತೆ ಅನುಪಮ್ ಖೇರ್ ಕಾಣಿಸಿಕೊಂಡಿದ್ದಾರೆ. ನ್ಯೂಯಾರ್ಕ್ ರಸ್ತೆಯಲ್ಲಿ ಇಬ್ಬರು ಓಡಾಡುತ್ತಿರುವ ವಿಡಿಯೋವನ್ನು ವೈರಲ್ ಮಾಡಿರುವ ರಿಷಿ, ಅನುಪಮ್ ಖೇರ್ ಭೇಟಿಯಾಗಿದ್ದು ತುಂಬಾ ಖುಷಿ ನೀಡಿದೆ ಎಂದಿದ್ದಾರೆ. ಇತ್ತ ಅನುಪಮ್ ಖೇರ್ ಕೂಡ ವಿಡಿಯೋ ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರೆ.

ರಿಷಿ ಕಪೂರ್ ಸೆಪ್ಟೆಂಬರ್ 29 ರಂದು ಅಮೆರಿಕಾಕ್ಕೆ ತೆರಳುತ್ತಿರುವುದಾಗಿ ಟ್ವಿಟ್ ಮಾಡಿದ್ದರು. ನಂತ್ರ ಅವ್ರ ತಾಯಿ ನಿಧನರಾದಾಗ ರಿಷಿ ಭಾರತಕ್ಕೆ ಬರ್ತಾರೆ ಎಂದುಕೊಳ್ಳಲಾಗಿತ್ತು. ಆದ್ರೆ ಅವ್ರು ಬಂದಿರಲಿಲ್ಲ. ಹಾಗಾಗಿ ರಿಷಿ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ಹಬ್ಬಿತ್ತು.

ರಿಷಿಗೆ ಇನ್ನೂ ಪರೀಕ್ಷೆ ನಡೆಯುತ್ತಿದೆ. ಅವ್ರು ಕ್ಯಾನ್ಸರ್ ನ ಮೂರನೇ ಹಂತದಲ್ಲಿದ್ದಾರೆಂಬುದು ಸುಳ್ಳು. ಪರೀಕ್ಷಾ ವರದಿ ಬರುವವರೆಗೂ ಏನೂ ಹೇಳಲು ಸಾಧ್ಯವಿಲ್ಲವೆಂದು ಅವ್ರ ಸಹೋದರ ಹೇಳಿಕೆ ನೀಡಿದ್ದರು. ರಿಷಿ ಕಪೂರ್ ಜೊತೆ ಮಗ ರಣಬೀರ್ ಹಾಗೂ ಪತ್ನಿ ರೀತು ಅಮೆರಿಕಾದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...