alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಯಾರಿಸ್ ನಲ್ಲಿ ಓಡಿದೆ ಸವಾರನೇ ಇಲ್ಲದ ಬೈಕ್….ಇದೆಲ್ಲಾ ದೆವ್ವದ ಆಟನಾ?

ghost

ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಪ್ಯಾರಿಸ್ ನಲ್ಲಿ ಸವಾರನೇ ಇಲ್ಲದೆ ಬೈಕ್ ಓಡಿದೆ. ನಗರದ ಹೊರವಲಯದಲ್ಲಿರೋ 4ಎ ಆಟೋರೂಟ್ ನಲ್ಲಿ ಚಾಲಕನೇ ಇಲ್ಲದೆ ಬೈಕ್ ಓಡ್ತಾ ಇರೋ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.

ಈ ಬೈಕ್ ನಲ್ಲಿ ಯುವಕನೊಬ್ಬ ಬಂದಿದ್ದ. ಕಾರ್ ಒಂದಕ್ಕೆ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ವೇಳೆ ಸವಾರ ಬೈಕ್ ಅನ್ನು ಒಂದು ಕಡೆ ನಿಲ್ಲಿಸಿ, ಲಾಕ್ ಮಾಡಿದ್ದ. ಆದ್ರೆ ಇದ್ದಕ್ಕಿದ್ದಂತೆ ಬೈಕ್ ತಂತಾನೇ ಸ್ಟಾರ್ಟ್ ಆಗಿ ಮುಂದಕ್ಕೆ ಸಾಗಿದೆ.

ಕೂಡಲೇ ಬೈಕ್ ಸವಾರ, ಅಪಘಾತಕ್ಕೀಡಾಗಿದ್ದ ಕಾರ್ ಏರಿ ಹೊರಟಿದ್ದಾನೆ. ಎಷ್ಟು ಹುಡುಕಿದ್ರೂ ಬೈಕ್ ಮಾತ್ರ ಸಿಕ್ಕಿಲ್ಲ. ಅಪಘಾತದಲ್ಲಿ ಗಾಯಗೊಂಡಿದ್ದ ಆತ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದ.

ಈ ಘಟನೆ ನಡೆದು ಕೆಲವು ದಿನಗಳ ನಂತರ ಅಪಘಾತ ಸ್ಥಳದಿಂದ ಕಿಲೋ ಮೀಟರ್ ಗಟ್ಟಲೆ ದೂರದಲ್ಲಿ ಬೈಕ್ ಪತ್ತೆಯಾಗಿದೆ. ಬೈಕ್ ಸಿಕ್ಕಿರೋದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸವಾರನೇ ಇಲ್ಲದೆ ಬೈಕ್ ಅಷ್ಟು ದೂರ ಹೋಗಿದ್ಹೇಗೆ? ಇದು ದೆವ್ವದ ಆಟಾನಾ ಅನ್ನೋ ಕುತೂಹಲ ಎಲ್ಲರನ್ನು ಕಾಡುತ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...