alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಅತಿ ಸಿರಿವಂತ ವ್ಯಕ್ತಿಯ ಆಸ್ತಿ ಎಷ್ಟು ಗೊತ್ತಾ…?

ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್‌ನ ಮುಖ್ಯಸ್ಥ ಜೆಫ್ ಬೆಝೋಸ್ ಸಿರಿವಂತರಲ್ಲೇ ಸಿರಿವಂತರಾಗಿದ್ದಾರೆ.

ಫೋರ್ಬ್ಸ್ ಪ್ರಕಾರ, ಬೆಝೋಸ್ ಅವರ ನಿವ್ವಳ ಆಸ್ತಿ 130 ಬಿಲಿಯನ್ ಡಾಲರ್ ಆಗಿದ್ದು, ಭೂಮಿಯ ಅತ್ಯಂತ ಶ್ರೀಮಂತ ವ್ಯಕ್ತಿಯೆನಿಸಿಕೊಂಡಿದ್ದಾರೆ.

ಇವರು ಇತರರಿಗಿಂತ ಕನಿಷ್ಠ 50 ಬಿಲಿಯನ್ ಡಾಲರ್‌ನಷ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಬ್ಲೂಮ್‌ಬರ್ಗ್ ಕೋಟ್ಯಧೀಶರ ಸೂಚ್ಯಂಕದ ಪ್ರಕಾರ, ಜೆಫ್ ಅವರ ಆಸ್ತಿ, ವಿಶ್ವದ 2ನೇ ಅತಿ ಸಿರಿವಂತ, ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗಿಂತ 55 ಬಿಲಿಯನ್ ಡಾಲರ್‌ನಷ್ಟು ಹೆಚ್ಚಿದೆ.

ಈ ವರ್ಷ ಮಾರ್ಚ್‌ನಲ್ಲಿ, ಬೆಝೋಸ್ ಅವರು ವಾರೆನ್ ಬಫೆಟ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಆಗ ಬೆಝೋಸ್ ಅವರ ಆಸ್ತಿ 65.3 ಬಿಲಿಯನ್ ಡಾಲರ್‌ನಷ್ಟಿದ್ದರೆ, ಬಫೆಟ್ ಅವರ ಆಸ್ತಿ 64.3 ಬಿಲಿಯನ್ ಡಾಲರ್‌ನಷ್ಟಿತ್ತು ಎಂದು ಫೋರ್ಬ್ಸ್ ರಿಯಲ್ ಟೈಮ್ ವೆಲ್ತ್ ಟ್ರಾಕರ್ ಹೇಳಿದೆ.

ಅಮೆಜಾನ್‌ ಯಶಸ್ಸಿನಿಂದಾಗಿ 52ರ ಹರೆಯದ ಬೆಝೋಸ್ ಅವರ ಆಸ್ತಿ ಹಿಗ್ಗುತ್ತಾ ಹೋಗಿದೆ. ಅಮೆಜಾನ್ ಎರಡನೇ ತ್ರೈಮಾಸಿಕದಲ್ಲಿ ಭಾರೀ ಪ್ರಗತಿ ಸಾಧಿಸಿದ್ದು, 857 ಮಿಲಿಯನ್ ಡಾಲರ್ ಲಾಭ ಸಾಧಿಸಿದೆ. ವರ್ಷದ ಹಿಂದೆ ಇದ್ದ ಲಾಭ 92 ಮಿಲಿಯನ್ ಡಾಲರ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...