alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರ್ ನಲ್ಲಿ ಓಡಾಡ್ತಾರೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ

1520

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಗೆ ಐಷಾರಾಮಿ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ. ಪೋರ್ಷೆ ಕಂಪನಿ ಕಾರುಗಳನ್ನು ಅವರು ಹೆಚ್ಚಾಗಿ ಇಷ್ಟಪಡ್ತಾರೆ. ಅವರ ಬಳಿಯಿರುವ ಲಿಮೌಸಿನ್ ಕಾರು ಅತ್ಯಂತ ದುಬಾರಿ ಕಾರುಗಳಲ್ಲಿ ಒಂದು. ಅತ್ಯಂತ ವೇಗದ ಕಾರುಗಳ ಪಟ್ಟಿಯಲ್ಲಿ ಲಿಮೌಸಿನ್ ಹೆಸರು ಕೂಡ ಇದೆ. ಅವರ ಗ್ಯಾರೇಜ್ ನಲ್ಲಿ ಪೋರ್ಷೆಯ 911 ಹಾಗೂ 930 ಮಾದರಿಯ ಕಾರುಗಳೂ ಇವೆ.

ಕಾರುಗಳ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ಬಿಲ್ ಗೇಟ್ಸ್ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ. ಬಿಲ್ ಗೇಟ್ಸ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ಮೊದಲ ಹೆಸರು ವಿಲಿಯಂ ಹೆನ್ರಿ ಗೇಟ್ಸ್ III. ಅವರು ತಮ್ಮ 17ನೇ ವಯಸ್ಸಿನಲ್ಲಿಯೇ ಕಂಪ್ಯೂಟರ್ ಪ್ರೋಗ್ರಾಂ ಒಂದನ್ನು ಸಿದ್ಧಪಡಿಸಿದ್ದರು. ಅದು ಅವರ ಶಾಲಾ ವೇಳಾಪಟ್ಟಿಗೆ ಸಂಬಂಧಿಸಿದ್ದಾಗಿತ್ತು.

ಶ್ರೀಮಂತ ಬಿಲ್ ಗೇಟ್ಸ್ ಕಾಲೇಜ್ ಡ್ರಾಪ್ ಔಟ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿಲ್ಲ. 30 ನೇ ವಯಸ್ಸಿನಲ್ಲಿ ಮಿಲೇನಿಯರ್ ಆಗ್ತೀನಿ ಅಂತಾ ವಿಶ್ವವಿದ್ಯಾನಿಲಯದಲ್ಲಿ ಹೇಳಿದ್ದರು ಬಿಲ್ ಗೇಟ್ಸ್. ಆದ್ರೆ 31ನೇ ವಯಸ್ಸಿನಲ್ಲಿ ಮಿಲೇನಿಯರ್ ಆದ್ರು. ಬಿಲ್ ಗೇಟ್ಸ್ ಒಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಸಿಗ್ನಲ್ ಬ್ರೇಕ್ ಮಾಡಿದ್ದಲ್ಲದೆ, ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸಿದ್ದಕ್ಕೆ ಠಾಣೆ ಮೆಟ್ಟಿಲೇರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...