alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸ್ಟೋರಿ ಓದಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ….!

ರಷ್ಯಾದಲ್ಲಿ ಮಗನೊಬ್ಬ ತನ್ನ ಹೆತ್ತವರನ್ನೇ ಕೊಲ್ಲಲು ಹಂತಕರಿಗೆ ಸುಪಾರಿ ಕೊಟ್ಟಿದ್ದ ಆಘಾತಕಾರಿ ಘಟನೆ ನಡೆದಿದೆ. 10 ವರ್ಷದ ಸೋದರಿಯನ್ನು ಕೂಡ ಕೊಲೆ ಮಾಡಲು ಸಂಚು ರೂಪಿಸಿದ್ದ. ಆದ್ರೆ ಪೋಷಕರು ಬುದ್ಧಿವಂತಿಕೆಯಿಂದ ಧನದಾಹಿ ಮಗನನ್ನು ಹಿಡಿದಿದ್ದಾರೆ.

22 ವರ್ಷದ ಸೋಚಿ ಎಂಬ ಯುವಕನ ತಂದೆ-ತಾಯಿ ಬಳಿ ತುಂಬಾ ಹಣವಿತ್ತು. ಅದನ್ನು ಪಡೆಯುವ ಆಸೆಯಿಂದ ಅವರನ್ನು ಕೊಲ್ಲಲು ಸೋಚಿ ಸುಪಾರಿ ಕೊಟ್ಟಿದ್ದ. ಮನೆಯಲ್ಲಿ ಎಲ್ಲೆಲ್ಲಿ ಕ್ಯಾಮರಾಗಳಿವೆ? ನಾಯಿಯಿಂದ ಹೇಗೆ ಬಚಾವ್ ಆಗಬೇಕು ಎಂಬುದನ್ನೆಲ್ಲ ಹಂತಕರಿಗೆ ಹೇಳಿಕೊಟ್ಟಿದ್ದ.

ಡಿಟೆಕ್ಟಿವ್ ಗಳ ಮೂಲಕ ಮಗನ ದುಷ್ಕೃತ್ಯ ಬಗ್ಗೆ ತಿಳಿದ ಹೆತ್ತವರು, ಸತ್ತಂತೆ ನಾಟಕವಾಡಿದ್ದಾರೆ. ನಕಲಿ ಚಾಕು, ನಕಲಿ ರಕ್ತದ ಮೂಲಕ ಕೊಲೆಯಾದಂತೆ ನಟಿಸಿದ್ದಾರೆ. ಕೊಲೆಯ ಸಾಕ್ಷ್ಯಗಳನ್ನು ಹಂತಕ ಸೋಚಿಗೆ ತಂದು ಕೊಟ್ಟಿದ್ದ. ಅದನ್ನು ನೋಡಿ ಖುಷಿಪಟ್ಟ ಸೋಚಿ, ಒಪ್ಪಂದದಂತೆ ಆತನಿಗೆ 38,000 ಪೌಂಡ್ ಹಣ ಕೊಡಲು ಸಿದ್ಧನಾದ.

ಅದೇ ಸಮಯಕ್ಕೆ ಸರಿಯಾಗಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ಫೋಷಕರನ್ನು ಕೊಲ್ಲಲು ಪ್ರಯತ್ನಿಸಿದ್ದಾಗಿ ಯುವಕ ತಪ್ಪೊಪ್ಪಿಕೊಂಡಿದ್ದಾನೆ. ಆರೋಪ ಸಾಬೀತಾದಲ್ಲಿ ಆತನಿಗೆ 15 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...