alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಮಂತಿಕೆಯ ಪ್ರದರ್ಶನಕ್ಕೆ ಇವರೇನು ಮಾಡಿದ್ದಾರೆ ಗೊತ್ತಾ?

ಶ್ರೀಮಂತರು ತಮ್ಮ ವೈಭೋಗವನ್ನು ಪ್ರದರ್ಶಿಸಲು ಹಲವಾರು ದಾರಿ ಅನುಸರಿಸುತ್ತಾರೆ. ಆದರೆ ಇಂತಹ ಆಗರ್ಭ ಶ್ರೀಮಂತರ ಮಕ್ಕಳು ತಮ್ಮ ಸಂಪತ್ತನ್ನು ಪ್ರದರ್ಶಿಸಲು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಲಂಡನ್ ನಲ್ಲಿನ ಭಾರೀ ಸಿರಿವಂತರ ಮಕ್ಕಳು ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಲೆಂದೇ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಇನ್ಸ್ಟಾಗ್ರಾಂಗಳಲ್ಲಿ ಗ್ರೂಪ್ ಮಾಡಿಕೊಂಡಿದ್ದು, ಇದಕ್ಕೆ ಅಸಂಖ್ಯಾಂತ ಮಂದಿ ಫಾಲೋವರ್ಸ್ ಗಳಿದ್ದಾರೆ.

ಫೋಟೋಗಳನ್ನು ಶೇರ್ ಮಾಡುವ ಇನ್ಸ್ಟಾಗ್ರಾಂ ನಲ್ಲಿ Rich Kids of London ಗ್ರೂಪ್ ಅಸಂಖ್ಯಾತ ಫಾಲೋವರ್ಸ್ ಗಳನ್ನು ಹೊಂದಿದ್ದು, ಇಲ್ಲಿ ಕೆಲವರು ತಮ್ಮಲ್ಲಿರುವ ಕಾರುಗಳ ಸಂಗ್ರಹದ ಚಿತ್ರ ಹಾಕಿದರೆ, ಮತ್ತೊಬ್ಬಾಕೆ ಬಂಗಾರದ ಬೆಂಟ್ಲಿ ಕಾರಿನ ಮುಂದೆ ನಿಂತಿರುವ ಚಿತ್ರ ಹಾಕಿದ್ದಾಳೆ. ಹಣದ ಮದ ನೆತ್ತಿಗೇರಿಸಿಕೊಂಡವನೊಬ್ಬ 50 ಪೌಂಡ್ ನೋಟಿನಲ್ಲಿ ತನ್ನ ಶೂ ಒರೆಸಿಕೊಂಡಿದ್ದಾನೆ. ಮತ್ತೊಬ್ಬಾತ ಖಾಸಗಿ ವಿಮಾನದ ಚಿತ್ರ ಹಾಕಿಕೊಂಡಿದ್ದಾನೆ. ಈ ಎಲ್ಲ ಚಿತ್ರಗಳಿಗೂ ಆಪಾರ ಸಂಖ್ಯೆಯ ಲೈಕ್ಸ್ ಸಹ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...