alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ ಇಷ್ಟು ಸಮಯ ಸೆಕ್ಸ್ ಎಂಜಾಯ್ ಮಾಡ್ತಾರೆ ದಂಪತಿ

ನಿಮ್ಮ ಸೆಕ್ಸ್ ಸೆಷನ್ ಎಷ್ಟು ಹೊತ್ತಿರುತ್ತದೆ? ಸೆಕ್ಸ್ ಗೆ ಎಷ್ಟು ಸಮಯ ಬೇಕು? ಆತುರದಲ್ಲಿ ಮುಗಿಯಿತಾ? ಹೀಗೆ ಅನೇಕ ಪ್ರಶ್ನೆಗಳು ದಂಪತಿಯನ್ನು ಕಾಡೋದು ಸಾಮಾನ್ಯ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಸಿದೆ.

ಈ ಸಮೀಕ್ಷೆಯಲ್ಲಿ 432 ದಂಪತಿ ಹಾಗೂ 2 ಸಾವಿರಕ್ಕೂ ಹೆಚ್ಚು ಎಕ್ಸ್ ಪರ್ಟ್ಗಳು ಪಾಲ್ಗೊಂಡಿದ್ದರು. ದಂಪತಿಗೆ ಸೆಕ್ಸ್ ಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಗಿದೆ. ಸಮೀಕ್ಷೆ ಫಲಿತಾಂಶ ಕುತೂಹಲಕಾರಿಯಾಗಿದೆ. ಸೆಕ್ಸ್ ಗೆ ದಂಪತಿ 12 ನಿಮಿಷ ತೆಗೆದುಕೊಳ್ತಾರೆಂಬ ಸಂಗತಿ ಬಹಿರಂಗವಾಗಿದೆ.

12 ನಿಮಿಷಕ್ಕಿಂತ ಹೆಚ್ಚು ಸಮಯ ಕೂಡ ಹಿಡಿಯುತ್ತದೆ. ಅಮೆರಿಕಾದಲ್ಲಿ ದಂಪತಿ ಸಂಬಂಧಕ್ಕೆ 19 ನಿಮಿಷ ತೆಗೆದುಕೊಳ್ತಾರೆ. ಅವ್ರು ಇದ್ರಿಂದ ಖುಷಿ, ಸಂತೃಪ್ತಿ ಎರಡನ್ನೂ ಪಡೆಯುತ್ತಾರೆ. ಮುಂದಿನ ಬಾರಿ ಹೊಸ ಪ್ರಯೋಗ ಮಾಡ್ತಾರೆ ಎಂಬುದು ಸಮೀಕ್ಷೆ ಹೇಳುತ್ತದೆ.

ಸಮೀಕ್ಷೆಯಲ್ಲಿ ದಂಪತಿಗೆ ಇನ್ನೂ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಸಮೀಕ್ಷೆಯಲ್ಲಿ ಮೌಖಿಕ ಸಂಭೋಗ, ಲೈಂಗಿಕ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮಹಿಳೆಯರಿಗೆ ಕ್ಲೈಮ್ಯಾಕ್ಸ್ ತಲುಪಲು 12 ನಿಮಿಷಕ್ಕಿಂತ ಹೆಚ್ಚು ಸಮಯ ಬೇಕು. ಸೆಕ್ಸ್ ಅವಧಿ 30 ನಿಮಿಷಕ್ಕಿಂತ ಕಡಿಮೆ ಇದ್ದರೆ ಮಹಿಳೆಯರು ಕ್ಲೈಮ್ಯಾಕ್ಸ್ ತಲುಪಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...