alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯಪಾನ ಮಾಡಿದ ಚಾಲಕರು ಪೊಲೀಸರನ್ನು ಯಾಮಾರಿಸೋದು ಹೀಗೆ…!

ಕ್ರಿಸ್ಮಸ್ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಡ್ರಿಂಕ್ & ಡ್ರೈವ್ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಶೇ.29ರಷ್ಟು ಮಂದಿ ಕುಡಿದು ಗಾಡಿ ಓಡಿಸ್ತಿರೋದು ಈ ಸಮೀಕ್ಷೆಯಲ್ಲಿ ಬಯಲಾಗಿದೆ. 2000 ಚಾಲಕರನ್ನು ಸಂದರ್ಶಿಸಲಾಗಿದ್ದು, ಅವರಲ್ಲಿ ಬಹುತೇಕ ಮಂದಿ ಮದ್ಯಪಾನ ಮಾಡಿ ಗಾಡಿ ಓಡಿಸೋದಾಗಿ ಒಪ್ಪಿಕೊಂಡಿದ್ದಾರೆ.

ಈ ರೀತಿ ಮಾಡುವವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚು. ಡ್ರಿಂಕ್ & ಡ್ರೈವ್ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೂಡ ವಾಹನ ಚಾಲಕರು ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ. ವೇಗದ ಮಿತಿಯನ್ನು ಮೀರದೇ ನಿಧಾನವಾಗಿ ಸಾಗುವ ಮೂಲಕ ಪೊಲೀಸರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸ್ತಾರೆ.

ಶೇ.16ರಷ್ಟು ಚಾಲಕರು ಮುಖ್ಯರಸ್ತೆಯಲ್ಲಿ ತೆರಳದೇ ಸಣ್ಣ ಪುಟ್ಟ ಗಲ್ಲಿಗಳ ಮೂಲಕ ಹೋಗಿಬಿಡುತ್ತಾರೆ. ಇನ್ನು ಕೆಲವರು ಮದ್ಯದ ವಾಸನೆ ಬರದಂತೆ ತಡೆಯಲು ಬಾಯಲ್ಲಿ ಚೂಯಿಂಗ್ ಗಮ್ ಅಗಿಯುತ್ತಿರುತ್ತಾರೆ. ಶೇ.5ರಷ್ಟು ಚಾಲಕರು ಪರ್ಫ್ಯೂಮ್ ಪೂಸಿಕೊಂಡು ಪೊಲೀಸರನ್ನು ಯಾಮಾರಿಸ್ತಾರೆ.

ಶೇ.11ರಷ್ಟು ಮಂದಿ ಒಂದು ಕಪ್ ಕಾಫಿ ಕುಡಿದು, ಅಲ್ಕೋಹಾಲ್ ವಾಸನೆ ಬರದಂತೆ ಎಚ್ಚರ ವಹಿಸ್ತಾರೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಕೂಡ ನಿಯಮ ಬಾಹಿರ. ಇದಕ್ಕೆ ದಂಡವನ್ನೂ ಹಾಕಲಾಗುತ್ತದೆ. ಆದ್ರೂ ಶೇ.61ರಷ್ಟು ಚಾಲಕರು ವಾಹನ ಓಡಿಸುವಾಗ ಮೊಬೈಲ್ ಬಳಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...