alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ಮುಷರಫ್ ಗೆ ಮುಖಭಂಗ

ಜುಲೈ 25 ರಂದು ನಡೆಯಲಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ್ದ ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಮುಖಭಂಗಕ್ಕೊಳಗಾಗಿದ್ದಾರೆ.

ಖೈಬರ್ ಪ್ರಾಂತ್ಯದ ಉತ್ತರ ಛಿತ್ರಾಲ್ ಜಿಲ್ಲೆಯಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ಮುಷರಫ್ ನಾಮಪತ್ರ ಸಲ್ಲಿಸಿದ್ದು, ಆದರೆ 2013 ರಲ್ಲಿ ಪೇಷಾವರ ಹೈಕೋರ್ಟ್ ಮುಷರಫ್ ಚುನಾವಣೆ ಸ್ಪರ್ಧೆಗೆ ಜೀವಿತಾವಧಿಯವರೆಗೆ ನಿಷೇಧ ಹೇರಿರುವ ಕಾರಣ ನಾಮಪತ್ರ ತಿರಸ್ಕೃತಗೊಂಡಿದೆ.

ತಮ್ಮ ಸ್ಪರ್ಧೆಗೆ ಹೈಕೋರ್ಟ್ ನಿಷೇಧ ಹೇರಿರುವುದನ್ನು ಪ್ರಶ್ನಿಸಿ 74 ವರ್ಷದ ಪರ್ವೇಜ್ ಮುಷರಫ್, ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಜೂನ್ 13 ರಂದು ಖುದ್ದು ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ ಮುಷರಫ್ ವಿಚಾರಣೆಗೆ ಗೈರುಹಾಜರಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...