alex Certify
ಕನ್ನಡ ದುನಿಯಾ       Mobile App
       

Kannada Duniya

ಸಿರಿಯಾ ಸಂತ್ರಸ್ಥರ ನೆರವಿಗೆ ಧಾವಿಸಿದ ‘ಖಾಲ್ಸಾ ಏಡ್’

ಅಂತರ್ಯುದ್ದದಿಂದ ತತ್ತರಿಸಿರುವ ಸಿರಿಯಾದಲ್ಲಿ ಸರಕಾರಿ ಪಡೆಗಳಿಂದ ನಾಗರಿಕರ ಮಾರಣಹೋಮ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇದರ ವಿಡಿಯೋಗಳು ಎಲ್ಲರನ್ನೂ ಬೆಚ್ಚಿಬೀಳಿಸುವಂತಿವೆ.

ವಿಶ್ವ ಸಮುದಾಯ, ಸಿರಿಯಾ ಸಂತ್ರಸ್ಥರ ನೆರವಿಗೆ ಧಾವಿಸಬೇಕೆಂಬ ಕೂಗುಗಳು ಕೇಳಿ ಬರುತ್ತಿರುವ ಮಧ್ಯೆ ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯೊಂದು ಸಂತ್ರಸ್ಥರ ನೆರವಿಗೆ ನಿಲ್ಲುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ.

ಸಿಖ್ ಸಮುದಾಯದ ಸ್ವಯಂ ಸೇವಾ ಸಂಸ್ಥೆ ‘ಖಾಲ್ಸಾ ಏಡ್’ ಕಾರ್ಯಕರ್ತರು, ಸಂತ್ರಸ್ಥರಿಗೆ ಆಹಾರ, ಆಶ್ರಯ ಹಾಗೂ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದಾರೆ. ಈ ಹಿಂದೆಯೂ ‘ಖಾಲ್ಸಾ ಏಡ್’ ಅಂತರ್ಯುದ್ದ ಸಂಭವಿಸಿದ ದೇಶಗಳಲ್ಲಿ ಸಂತ್ರಸ್ಥರಿಗೆ ನೆರವು ನೀಡಿದ್ದು, ಈಗ ಸಿರಿಯಾದಲ್ಲಿ ಆ ಕಾರ್ಯವನ್ನು ಮುಂದುವರೆಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...