alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ ಉಡುಪು ಧರಿಸಲು ಒಲ್ಲೆ ಎಂದ ಯುವತಿ ಕಥೆ ಏನಾಯ್ತು..?

owner-of-bird-and-beer-responds-to-claims-woman-sacked-for-not-wearing-a-bra-1

ಇಂಗ್ಲೆಂಡ್ ನಲ್ಲಿ ರೆಸ್ಟೋರೆಂಟ್ ಮಾಲೀಕನೊಬ್ಬ ವಿಚಿತ್ರ ಕಾರಣಕ್ಕೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾನಂತೆ. ಕೆಲಸದ ಅವಧಿಯಲ್ಲಿ ಬ್ರಾ ಧರಿಸಲು ನಿರಾಕರಿಸಿದ್ದಕ್ಕೆ ಮಾಲೀಕ ನನ್ನನ್ನು ಕೆಲಸದಿಂದ ವಜಾ ಮಾಡಿದ್ದಾನೆ ಅಂತಾ ಮಹಿಳಾ ಉದ್ಯೋಗಿಯೊಬ್ಬಳು ಆರೋಪ ಮಾಡಿದ್ದಾಳೆ.

ಈಸ್ಟ್ ಯಾರ್ಕ್ ಶೈರ್ ನಲ್ಲಿರುವ ಬರ್ಡ್ & ಬಿಯರ್ ರೆಸ್ಟೋರೆಂಟ್ ಮಾಲೀಕ ತನ್ನ ಬಗ್ಗೆ ಅನುಚಿತ ಲೈಂಗಿಕ ಹೇಳಿಕೆ ನೀಡಿದ್ದಾನೆ ಅಂತಾ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾಳೆ. ಮೂವರು ಸಿಬ್ಬಂದಿ ಹಾಗೂ ಗ್ರಾಹಕರ ಎದುರಲ್ಲೇ ತನ್ನನ್ನು ಅವಮಾನಿಸಿದ್ದಾನೆ ಅಂತಾ ಹೇಳಿದ್ದಾಳೆ.

owner-of-bird-and-beer-responds-to-claims-woman-sacked-for-not-wearing-a-bra

ನನಗೆ ಕಂಫರ್ಟೆಬಲ್ ಎನಿಸುವಂತಹ ಬಟ್ಟೆಯನ್ನು ಧರಿಸುವ ಸ್ವಾತಂತ್ರ್ಯವೂ ಇಲ್ವಾ ಅಂತಾ ಪ್ರಶ್ನಿಸಿದ್ದಾಳೆ. ಯುವತಿ ಮಾಡಿರುವ ಫೇಸ್ಬುಕ್ ಪೋಸ್ಟ್ ವೈರಲ್ ಆಗಿದ್ದು, ಹಲವರು ಇದನ್ನು ಶೇರ್ ಮಾಡಿದ್ದಾರೆ. ಅನಿವಾರ್ಯವಾಗಿ ರೆಸ್ಟೋರೆಂಟ್ ತನ್ನ ಫೇಸ್ಬುಕ್ ಕಮೆಂಟ್ಸ್ ಸೆಕ್ಷನ್ ಅನ್ನೇ ಕ್ಲೋಸ್ ಮಾಡಿದೆ.

ಆದ್ರೆ ಯುವತಿ ಮಾಡಿರೋ ಆರೋಪವನ್ನು ರೆಸ್ಟೋರೆಂಟ್ ತಳ್ಳಿಹಾಕಿದೆ. ಯಾವುದೇ ನೌಕರರನ್ನು ಕೂಡ ಕೆಲಸದಿಂದ ಕಿತ್ತುಹಾಕಿಲ್ಲ ಅಂತಾ ಸ್ಪಷ್ಟಪಡಿಸಿದೆ. ಎಲ್ಲಾ ಉದ್ಯೋಗಿಗಳಿಗೆ ಅತ್ಯಂತ ಕಾಳಜಿ ಮತ್ತು ರಕ್ಷಣೆ ನೀಡಲಾಗ್ತಿದೆ ಅಂತಾ ಹೇಳಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...