alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟೇಲ್‌ನಲ್ಲಿ ಊಟ ಮಾಡಿ ಹಣ ಗಳಿಸಿದ್ಲು ಅಜ್ಜಿ

ನಾವೆಲ್ಲ ಹೊಟೇಲ್‌ಗೆ ಹೋದರೆ ದುಡ್ಡು ಕೊಟ್ಟು ಬರುತ್ತೇವೆ ತಾನೇ? ಆದರೆ ಇಲ್ಲೊಬ್ಬ ಅಜ್ಜಿ ತನ್ನ ಹುಟ್ಟುಹಬ್ಬಕ್ಕೆ ಹೊಟೇಲ್‌ಗೆ ಹೋಗಿ ಊಟ ಮಾಡಿ ಅವರ ಕೈಯಿಂದಲೇ ಹಣ ಪಡೆದುಕೊಂಡು ಬಂದಿದ್ದಾರೆ! ಆಶ್ಚರ್ಯವಾಯಿತೇ? ಇದೇನು ಕಥೆ ನೋಡೋಣ ಬನ್ನಿ.

ಅಮೆರಿಕದ ಮಿಸ್ಸೌಲಾ ನಗರದ ಮೋಂಟನಾ ಕ್ಲಬ್‌ ಮಾಲೀಕ ತನ್ನ ಗ್ರಾಹಕರಿಗೆ ಒಂದು ಅದ್ಭುತವಾದ ಡಿಸ್ಕೌಂಟ್ ಆಫರ್ ಇಟ್ಟಿದ್ದಾನೆ. ಅದೇನಂದ್ರೆ, ಯಾವುದೇ ಗ್ರಾಹಕ ಹುಟ್ಟುಹಬ್ಬದಂದು ಈ ಕ್ಲಬ್‌ಗೆ ಹೋಗಿ ಊಟ ಮಾಡಿದರೆ, ಅವರ ವಯಸ್ಸಿನಷ್ಟು ಶೇಕಡಾ ರಿಯಾಯ್ತಿ ನೀಡುತ್ತಾನೆ.

109 ವರ್ಷದ ಹೆಲೆನ್ ಸೆಲ್ಫ್ ಎಂಬ ಅಜ್ಜಿ ಇತ್ತೀಚೆಗೆ ಈ ಕ್ಲಬ್‌ನಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡರು. ಅಲ್ಲಿ ಕುಟುಂಬದವರ ಜತೆ ಊಟವನ್ನೂ ಮಾಡಿದರು.

ಕೊನೆಗೆ ಹೊಟೇಲ್‌ ತನ್ನ ಪದ್ಧತಿಯಂತೆ ಈ ಅಜ್ಜಿಗೆ ಶೇ.109 ರಷ್ಟು ರಿಯಾಯ್ತಿ ನೀಡಿತು. ಅಂದರೆ, ಹೊಟೇಲ್ ಸ್ವತಃ ಅಜ್ಜಿಗೇ ಹಣ ಪಾವತಿಸಿತು. ರೆಸ್ಟೋರೆಂಟ್ ಮಾಲೀಕ ನಿಕ್ ಅಲೋನ್ಝೋ ಅವರು ಡಾಲರ್ ನೋಟನ್ನು ಅಜ್ಜಿಯ ಕೈಗಿತ್ತರು. ಇದಕ್ಕೆ ಪ್ರತಿಯಾಗಿ ನಿಕ್‌ ಅವರ ಕೆನ್ನೆಗೆ ಅಜ್ಜಿ ಪ್ರೀತಿಯಿಂದ ಮುತ್ತು ನೀಡಿದರು.

ಇಷ್ಟೆಲ್ಲಾ ಆದ ಮೇಲೆ ಈ ಹಿರಿಯಜ್ಜಿ ಆತ್ಮವಿಶ್ವಾಸದಿಂದ ಹೇಳಿದ್ದೇನು ಗೊತ್ತಾ? “ನಾನು ಮುಂದಿನ ವರ್ಷ ಮತ್ತೆ ಬರುತ್ತೇನೆ” ಅಷ್ಟೇ ಅಲ್ಲ, “ನಾನು ಮುತ್ತು ನೀಡಿದ್ದನ್ನು ಆತನ ಹೆಂಡತಿಗೆ ಯಾರೂ ಹೇಳಬೇಡಿ ” ಅಂತ ಚಟಾಕಿ ಕೂಡಾ ಹಾರಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...