alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿಗಳ ಲಿವರ್ ಮೇಲೆ ತನ್ನ ಹೆಸರು ಕೆತ್ತಿದ್ದಾನೆ ಈ ವೈದ್ಯ

ಬ್ರಿಟನ್ ನ ಇತಿಹಾಸದಲ್ಲೇ ಇಂತಹ ಪ್ರಕರಣ ನಡೆದಿರೋದು ಇದೇ ಮೊದಲು. ವೈದ್ಯನೊಬ್ಬ ಇಬ್ಬರು ರೋಗಿಗಳ ಲಿವರ್ ಕಸಿ ಮಾಡುವ ಸಂದರ್ಭದಲ್ಲಿ ಅದರ ಮೇಲೆ ತನ್ನ ಹೆಸರಿನ ಮೊದಲಕ್ಷರವನ್ನು ಕೆತ್ತಿದ್ದಾನೆ. ಈ ವಿಚಿತ್ರ ಕೃತ್ಯ ನಡೆಸಿರುವ ವೈದ್ಯ 53 ವರ್ಷದ ಸಿಮೊನ್ ಬ್ರಾಹ್ಮಾಲ್.

ರೋಗಿಗಳ ಲಿವರ್ ಮೇಲೆ ‘SB’ ಎಂಬ ಅಕ್ಷರಗಳನ್ನು ವೈದ್ಯನೇ ಕೆತ್ತಿರುವುದು ಸಾಬೀತಾಗಿದೆ. 2013ರಲ್ಲಿ ಬರ್ಮಿಂಗ್ಹಾಮ್ ನ ಕ್ವೀನ್ ಎಲಿಜಬೆತ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸಿಮೊನ್ ಬ್ರಾಹ್ಮಾಲ್ ಒಬ್ಬ ಟ್ರಾನ್ಸ್ ಪ್ಲಾಂಟ್ ಸರ್ಜನ್. ಸುಮಾರು 12 ವರ್ಷಗಳಿಂದ ಇದೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.

ವೈದ್ಯ ನಂಬಿಕೆ ದ್ರೋಹ ಎಸಗಿದ್ದಾನೆ, ಇದು ಕಾನೂನಿಗೆ ವಿರುದ್ಧವಾದ ಕೃತ್ಯ ಅಂತಾ ಕೋರ್ಟ್ ಕೂಡ ಹೇಳಿದೆ. ಆ ರೋಗಿಗಳ ಮೇಲೆ ಡಾಕ್ಟರ್ ಸಿಮೊನ್ ಹಲ್ಲೆ ಕೂಡ ನಡೆಸಿದ್ದಾನೆ ಅನ್ನೋ ಆರೋಪವಿದೆ. ಸದ್ಯ ವೈದ್ಯನಿಗೆ ಜಾಮೀನು ಸಿಕ್ಕಿದ್ದು, ಜನವರಿ 12ರಂದು ವಿಚಾರಣೆಗೆ ಹಾಜರಾಗಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...