alex Certify
ಕನ್ನಡ ದುನಿಯಾ       Mobile App
       

Kannada Duniya

OMG: ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದೆವ್ವ…!

ಭೂತ ಪ್ರೇತದ ಕಥೆಗಳನ್ನು ಕೇಳುವಾಗ ಮೈ ನಡುಗುವುದು ಕಾಮನ್. ಇನ್ನು ದೆವ್ವಗಳ ಇರುವಿಕೆ ಬಗ್ಗೆ ಹಲವರು ಹೇಳುತ್ತಾರಾದರೂ ಇದು ದೃಢಪಟ್ಟಿಲ್ಲ. ಆದರೆ ಫಿಲಿಪೈನ್ಸ್ ನ ಪಂಗಾಸಿನಾನ್ ನಲ್ಲಿ ನಡೆದಿರುವ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಸಿಸಿ ಟಿವಿಯಲ್ಲಿ ದೆವ್ವ ರಸ್ತೆ ದಾಟುತ್ತಿರುವ ದೃಶ್ಯ ಸೆರೆಯಾಗಿದೆ.

ಈ ದೃಶ್ಯವನ್ನು ವೀಕ್ಷಿಸಿದ್ರೆ ಅಚ್ಚರಿಯಾಗುತ್ತದೆ. ಜೊತೆಗೆ ಇದು ನಿಜವಾ ಎಂಬ ಪ್ರಶ್ನೆ ಮೂಡದೆ ಇರದು. ಸಿಸಿ ಟಿವಿಯಲ್ಲಿ ರೆಕಾರ್ಡ್ ಆದ ದೃಶ್ಯದಲ್ಲಿ ದೆವ್ವವೊಂದು ರಸ್ತೆಯಿಂದ ಇನ್ನೊಂದು ಬದಿಗೆ ದಾಟುತ್ತದೆ. ಈ ವೇಳೆ ಅದರ ಮೇಲೆ ಲಾರಿ, ಜೀಪು ಹಾದು ಹೋಗಿವೆ. ಈ ದೃಶ್ಯ ಸದ್ಯ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡ್ತಾ ಇದೆ.

ಈ ದೃಶ್ಯ ಜುಲೈನಲ್ಲಿ ಸೆರೆಯಾಗಿದ್ದು, ಇತ್ತೀಚೆಗೆ ಪರಿಶೀಲನೆ ಮಾಡುವಾಗ ಬೆಳಕಿಗೆ ಬಂದಿದೆ. ಇನ್ನು ದೆವ್ವ ಅಡ್ಡಾಡುತ್ತಿರುವ ದೃಶ್ಯವನ್ನು ನೋಡಿದ ಸ್ಥಳೀಯರು ಭಯಭೀತರಾಗಿದ್ದಾರೆ. ಇದಕ್ಕೂ ಮೊದಲು ಪ್ರೇತವೊಂದು ಇದೇ ಪ್ರಾಂತ್ಯದ ಒಂದು ಅಂಗಡಿಯ ಮುಂಭಾಗದಲ್ಲಿ ಕಾಣಿಸಿಕೊಂಡಿದ್ದಾಗಿ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...