
ಜಾಗತಿಕ ತಾಪಮಾನ ಬಹುತೇಕ ಎಲ್ಲಾ ರಾಷ್ಟ್ರಗಳನ್ನೂ ಕಾಡುತ್ತಿರುವ ಸಮಸ್ಯೆ. ಇದರಿಂದ ಮರುಭೂಮಿ ಪ್ರದೇಶ ಹೆಚ್ಚುತ್ತಿದ್ದು, ವಿವಿಧ ರಾಷ್ಟ್ರಗಳಲ್ಲಿ ಜಲಕ್ಷಾಮ ಎದುರಾಗಿದೆ. ಭಾರತ, ಸ್ಪೇನ್, ಮೊರಕ್ಕೋ ಮತ್ತು ಇರಾಕ್ ನಲ್ಲಿ ಜಲಾಶಯಗಳು ಬರಿದಾಗುತ್ತಿವೆ.
ಪರಿಣಾಮ ಸದ್ಯದಲ್ಲೇ ತೀವ್ರ ಬರಗಾಲ ಕಾಣಿಸಿಕೊಳ್ಳುವ ಆತಂಕ ಶುರುವಾಗಿದೆ. ಹನಿ ಹನಿ ನೀರಿಗಾಗಿ ಜನರು ಪರದಾಡುವಂತಹ ಪರಿಸ್ಥಿತಿ ಬರಲಿದೆ. ಮಿಲಿಯನ್ ಗಟ್ಟಲೆ ಜನರಿಗೆ ನೀರು ಪೂರೈಸುತ್ತಿದ್ದ ಮಧ್ಯಪ್ರದೇಶದ ಇಂದಿರಾ ಸಾಗರ ಜಲಾಶಯ ಹಾಗೂ ಸರ್ದಾರ್ ಸರೋವರ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.
ಕೇವಲ ಭಾರತದಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲಿ ಇದೇ ರೀತಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ವಿಶ್ವದ 500,000 ಡ್ಯಾಮ್ ಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಆತಂಕಕ್ಕೀಡುಮಾಡಿದೆ. ಮಳೆಯ ಅಭಾವ ಕೂಡ ನೀರಿನ ಕೊರತೆ ಉಂಟಾಗಲು ಪ್ರಮುಖ ಕಾರಣ.