alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಳಿ, ಕತ್ತೆಯನ್ನು ಸೋಲಿಸಿದ ಶ್ವಾನವೇ ಈ ನಗರದ ಮೇಯರ್

pit-bull

ಈ ನಾಯಿಯ ಹೆಸರು ಬ್ರೈನ್ನೆತ್ ಪೌಲ್ಟ್ರೋ. ಸಾಹಸಿ ಪಿಟ್ ಬುಲ್ ಡಾಗ್ ಈಗ ಕೆಂಟುಕಿ ನಗರದ ಮೇಯರ್. ಅಚ್ಚರಿಯಾದ್ರೂ ಇದು ಸತ್ಯ. ಚಿಕ್ಕ ಮರಿಯಿದ್ದಾಗಲೇ ಜಾರ್ಡಿ ಬ್ಯಾಂಫೋರ್ಟ್ ಎಂಬುವವರು ಬ್ರೈನಿಯನ್ನು ರಕ್ಷಿಸಿದ್ದರು.

ನಗರದ ಅಭಿವೃದ್ಧಿಗಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ಈ ಫನ್ನಿ ಮೇಯರ್ ಚುನಾವಣೆ ನಡೆಸಲಾಗಿದೆ. ಚುನಾವಣೆಯಲ್ಲಿ ಬ್ರೈನಿ, ಕೋಳಿ ಮತ್ತು ಕತ್ತೆಯನ್ನು ಸೋಲಿಸಿ ವಿಜಯಿಯಾಗಿದೆ. 1990ರಿಂದ್ಲೂ ಈ ರೀತಿಯ ಚುನಾವಣೆಯನ್ನು ಆಯೋಜಿಸಲಾಗ್ತಿದೆ.

3000ಕ್ಕೂ ಅಧಿಕ ಮತಗಳಿಂದ ಬ್ರೈನಿ ಮೇಯರ್ ಆಗಿ ಆಯ್ಕೆಯಾಗಿದೆ. ಕತ್ತೆ, ಕೋಳಿ ಮತ್ತು ಬೆಕ್ಕುಗಳು ಕೂಡ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಚುನಾವಣೆಯಿಂದ ಸಂಗ್ರಹವಾಗುವ ಹಣವನ್ನು ಪ್ರತಿವರ್ಷ ನಗರದ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತಿತ್ತು.

ಈ ಬಾರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ನಗರದ ಜನರಲ್ ಸ್ಟೋರ್ ಸುಟ್ಟು ಹೋಗಿದೆ. ಅದರ ರಿಪೇರಿಗಾಗಿ ಹಣವನ್ನು ಖರ್ಚು ಮಾಡಲಾಗುತ್ತದೆ. 1998ರಲ್ಲಿ ಗೂಫಿ ಬೋರ್ನೆಮನ್ ಎಂಬ ನಾಯಿ ಈ ನಗರದ ಮೊದಲ ಮೇಯರ್ ಆಗಿ ಆಯ್ಕೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...