alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಡ್, ಬ್ಲಾಂಕೆಟ್ ಇಲ್ದಿದ್ರೆ ನಿದ್ರೆನೇ ಬರ್ತಿರಲಿಲ್ಲ ಈ ಸಿಂಹಕ್ಕೆ…!

lambert-lionಕಾಡಿನ ರಾಜನೆಂದೇ ಕರೆಸಿಕೊಳ್ಳುವ ಸಿಂಹವೊಂದು ಸಾಕು ಪ್ರಾಣಿಯಂತೆ ಬೆಳೆದ ಕಾರಣ ಮತ್ತೇ ಕಾಡಿನ ವಾತಾವರಣಕ್ಕೆ ಹೊಂದಿಕೊಳ್ಳಲು ಫಜೀತಿ ಪಟ್ಟಿದೆ. ಮರಿಯಾಗಿದ್ದಾಗ ಮಾಡಿಕೊಂಡ ಅಭ್ಯಾಸವನ್ನು ತೊರೆಯಲು ಸಾಕಷ್ಟು ಕಸರತ್ತು ನಡೆಸಿದೆ.

ಅಮೆರಿಕಾದ ವ್ಯಕ್ತಿಯೊಬ್ಬ, ಸಣ್ಣ ಮರಿಯಾಗಿದ್ದ ಈ ಸಿಂಹವನ್ನು ತನ್ನ ಮಕ್ಕಳಿಗಾಗಿ ಖರೀದಿಸಿ ಮನೆಯಲ್ಲಿ ಸಾಕಿಕೊಂಡಿದ್ದ. ಆ ವೇಳೆ ಇದಕ್ಕೆ ಹಾಸಿಗೆ, ಹೊದಿಕೆ ಎಲ್ಲವನ್ನೂ ನೀಡಲಾಗಿತ್ತು. ಸಿಂಹವೂ ಅದಕ್ಕೆ ಹೊಂದಿಕೊಂಡಿತ್ತು.

ಅದು ಬೆಳೆದು ದೊಡ್ಡದಾದ ಮೇಲೆ ಅದರ ಆಕಾರ ನೋಡಿ ಇನ್ನಿದರ ಸಹವಾಸ ಸಾಕು ಎಂದು ಭಾವಿಸಿದವನು ಟೆಕ್ಸಾಸ್ ನ ಪ್ರಾಣಿ ಸಂರಕ್ಷಣಾ ಘಟಕಕ್ಕೆ ನೀಡಿದ್ದಾನೆ. ಅಲ್ಲಿಂದ ಆರಂಭವಾಗಿದೆ ಅದಕ್ಕೆ ಫಜೀತಿ. ಕಾಡಿನ ವಾತಾವರಣಕ್ಕೆ ತಕ್ಕಂತೆ ಈ ಸಿಂಹವನ್ನು ರೂಪಿಸಲು ಘಟಕದವರು ಪ್ರಯತ್ನ ಪಟ್ಟಿದ್ದು, ಹಸಿ ಮಾಂಸವನ್ನು ತಿನ್ನಲೇನೋ ಸಿಂಹ ಬೇಗನೆ ಕಲಿತಿದೆ. ಆದರೆ ಮಲಗಲು ಮಾತ್ರ ಅದಕ್ಕೆ ಬೆಡ್, ಬ್ಲಾಂಕೆಟ್ ನೀಡಬೇಕಾಗಿತ್ತು. ಈ ಸಿಂಹ ಕಾಡಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...