alex Certify
ಕನ್ನಡ ದುನಿಯಾ       Mobile App
       

Kannada Duniya

ದೇವತೆಯಂತೆ ನೆರವಿಗೆ ಬಂದ್ಲು ಅಪರಿಚಿತ ಯುವತಿ..!

ಗುರುತು ಪರಿಚಯವೇ ಇಲ್ಲದ ಜಾಗ, ಬೈಕ್ ನಲ್ಲಿ ಪೆಟ್ರೋಲ್ ಇಲ್ಲ, ಮೊಬೈಲ್ ನೆಟ್ವರ್ಕ್ ಸಹ ಇಲ್ಲದೇ ಇದ್ರೆ ಪಜೀತಿ ಅನುಭವಿಸೋದು ಗ್ಯಾರಂಟಿ. 23 ವರ್ಷದ ಟ್ರಾವೆಲ್ ಬ್ರಾಗರ್ ರೋಹಿತ್ ಸುಬ್ರಮಣ್ಯಂಗೆ ಕೂಡ ಇಂತದ್ದೇ ಪರಿಸ್ಥಿತಿ ಎದುರಾಗಿತ್ತು.

ಆತ ತನ್ನ ರಾಯಲ್ ಎನ್ ಫೀಲ್ಡ್ ಬೈಕ್ ಏರಿ ಕ್ರೊಯೇಷಿಯಾದಲ್ಲಿ ಸುತ್ತಾಡುತ್ತಿದ್ದ. ಹೈವೇಯಿಂದ ಬಹಳ ದೂರ ಬಂದುಬಿಟ್ಟಿದ್ದ, ಬೈಕ್ ಗೆ ಪೆಟ್ರೋಲ್ ತುಂಬಿಸಲು ಆತನಿಗೆ ಮರೆತೇ ಹೋಗಿತ್ತು. ರಾತ್ರಿ 10 ಗಂಟೆ ಸಮಯ, ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ.

ಕರೆ ಮಾಡಲು ಅಗತ್ಯವಿದ್ದಷ್ಟು ಡೇಟಾ ಕೂಡ ಆತನ ಇಂಟರ್ನೆಟ್ ಪ್ಯಾಕ್ ನಲ್ಲಿ ಇರಲಿಲ್ಲ. ರೋಹಿತ್ ಇದ್ದ ಸ್ಥಳದಲ್ಲಿ ಮನುಷ್ಯರ ಓಡಾಟವೂ ಇರಲಿಲ್ಲ. ಮುಂದೇನು ಮಾಡಬೇಕು ಅನ್ನೋದು ಗೊತ್ತಾಗದೇ ರೋಹಿತ್ SOS ಕರೆ ಮಾಡಿ ಸಹಾಯ ಕೇಳಿದ್ದಾನೆ.

ಅವರು ಇನ್ನೊಂದು ಗಂಟೆಯಲ್ಲಿ ಬರೋದಾಗಿ ಭರವಸೆ ನೀಡಿದ್ದರು. ಬೇಸರದಲ್ಲಿ ಕುಳಿತ ರೋಹಿತ್, ಟಿಂಡರ್ ಡೇಟಿಂಗ್ ಆ್ಯಪ್ ಓಪನ್ ಮಾಡಿದ್ದ. ಯಾರದ್ದಾದ್ರೂ ಸಹಾಯ ಕೇಳೋಣ ಎಂಬ ಆಲೋಚನೆ ಅವನಿಗೆ ಹೊಳೆದಿತ್ತು. ಆ್ಯಪ್ ನಲ್ಲಿ ಯುವತಿಯೊಬ್ಬಳ ಜೊತೆಗೆ ರೋಹಿತ್ ಚಾಟಿಂಗ್ ಶುರು ಮಾಡಿದ್ದ.

ತಾನು ಎಂಥಾ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಅನ್ನೋದನ್ನು ವಿವರಿಸಿದ. ಆಕೆಯ ಮನೆ ಕೂಡ ಅಲ್ಲೇ ಹತ್ತಿರದಲ್ಲಿತ್ತು. ರೋಹಿತ್ ಗೆ ಸಹಾರ ಮಾಡೋದಾಗಿ ಹೇಳಿದ ಯುವತಿ, ಸ್ವಲ್ಪ ಪೆಟ್ರೋಲ್ ತೆಗೆದುಕೊಂಡು ಬಂದ್ಲು.

ಇಬ್ಬರೂ ಬೈಕ್ ನಲ್ಲಿ ಹತ್ತಿರದ ಗ್ಯಾಸ್ ಸ್ಟೇಶನ್ ಗೆ ತೆರಳಿ ಪೆಟ್ರೋಲ್ ತುಂಬಿಸಿಕೊಂಡ್ರು. ಯುವತಿ, ರೋಹಿತ್ ಗೋಸ್ಕರ ಸ್ಯಾಂಡ್ ವಿಚ್ ಕೂಡ ತಂದಿದ್ಲು. ಅಪರಿಚಿತೆಯಾದ್ರೂ ಸಹಾಯ ಮಾಡಿದ ಯುವತಿ ನಿಜಕ್ಕೂ ಗ್ರೇಟ್ ಅಂತಾ ರೋಹಿತ್ ಇನ್ ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...