alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನೊಂದಿಗೆ ಪರೀಕ್ಷೆ ಬರೆದಿದ್ದಾಕೆಗೆ ಸಿಕ್ಕಿದೆ ಯಶಸ್ಸು

ಅಫ್ಘಾನಿಸ್ತಾನದ ಜಹಾಂತಾಪ್ ಅಹ್ಮದಿ ಕನಸು ಕೊನೆಗೂ ನನಸಾಗಿದೆ. 25 ವರ್ಷದ ಈ ಮಹಿಳೆ ಮೂವರು ಮಕ್ಕಳ ತಾಯಿ. ಎಲ್ಲರೂ ಐದು ವರ್ಷದೊಳಗಿನ ಪುಟ್ಟ ಪುಟ್ಟ ಮಕ್ಕಳು. ಇವಳ ಪತಿಗೆ ಓದು-ಬರಹ ಗೊತ್ತಿಲ್ಲ. ಆದ್ರೆ ಅಹ್ಮದಿ ಹೈಸ್ಕೂಲ್ ಮುಗಿಸಿದ್ದಾಳೆ.

ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದಾಳೆ. ಆದ್ರೆ ಅವಳಿಗೆ ಇನ್ನಷ್ಟು ಓದುವ ಹಂಬಲ. ಇತ್ತೀಚೆಗಷ್ಟೆ ಆಕೆ ತನ್ನ ಹಸುಗೂಸನ್ನು ತೊಡೆಯ ಮೇಲೆ ಮಲಗಿಸಿಕೊಂಡು, ನೆಲದ ಮೇಲೆ ಕುಳಿತೇ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ ಬರೆಯುತ್ತಿರುವ ದೃಶ್ಯ ವೈರಲ್ ಆಗಿತ್ತು.

ಈ ಪರೀಕ್ಷೆಗಾಗಿ ಆಕೆ ಪುಟ್ಟ ಕಂದನನ್ನು ಕರೆದುಕೊಂಡು ಸುಮಾರು 10 ಗಂಟೆಗಳ ಕಾಲ ಬಸ್ ಪ್ರಯಾಣ ಮಾಡಿದ್ದಾಳೆ. ಪರೀಕ್ಷೆ ಬರೆಯಲಾರಂಭಿಸುತ್ತಿದ್ದಂತೆ ಮಗು ಅಳಲಾರಂಭಿಸಿತ್ತು. ಹಾಗಾಗಿ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡೇ ಪರೀಕ್ಷೆ ಬರೆದಿದ್ಲು ಅಹ್ಮದಿ.

ಅವಳ ಶ್ರಮಕ್ಕೆ ಈಗ ತಕ್ಕ ಪ್ರತಿಫಲ ಸಿಕ್ಕಿದೆ. 200ಕ್ಕೆ 152 ಅಂಕ ಪಡೆದಿರುವ ಅಹ್ಮದಿ ಯೂನಿವರ್ಸಿಟಿಯಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದಾಳೆ. ಮೂಲ ಹಕ್ಕುಗಳೇ ಸಿಗದೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕಷ್ಟಪಡ್ತಾರೆ. ಅಂಥದ್ರಲ್ಲಿ ಶಿಕ್ಷಣ ಮುಂದುವರಿಸಲು ಸಾಹಸ ಮಾಡಿರೋ ಅಹ್ಮದಿ ನಿಜಕ್ಕೂ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾಳೆ.

پیشنهاد خوبی است

Posted by Yahya Erfan on Monday, March 19, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...