alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಜೋಡಿ ಮಾಡಿರುವ ಘನಂದಾರಿ ಕಾರ್ಯ ಕೇಳಿದ್ರೆ ಶಾಕ್ ಆಗ್ತೀರಾ…!

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತ ಮಜಾ ಮಾಡಲು ಹೊರಟ ಮೂವರು ಇದೀಗ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ…!

ಕಳೆದ ವರ್ಷ ಮಹಿಳೆಯೊಬ್ಬಳಿಗೆ ಸಹಾಯ ಮಾಡಿದ ನಿರಾಶ್ರಿತ ಮಾಜಿ ಸೈನಿಕನಿಗೆ ಮನೆ ಕಟ್ಟಿ ಕೊಡುವ ದೃಷ್ಟಿಯಿಂದ ಆನ್ ಲೈನ್ ನಲ್ಲಿ ಪ್ರಾರಂಭಿಸಲಾಗಿದ್ದ ಅಭಿಯಾನವೊಂದು ವಂಚನೆ ಪ್ರಕರಣವೆಂದು ನ್ಯೂಜೆರ್ಸಿಯ ಕೋರ್ಟ್ ತೀರ್ಪು ನೀಡಿದೆ.

ಹೀಗಾಗಿ ನಿರಾಶ್ರಿತನೆಂದು ಹೇಳಿಕೊಂಡ ವ್ಯಕ್ತಿ, ಅಭಿಯಾನ ಪ್ರಾರಂಭಿಸಿ ಸಾವಿರಾರು ಮಿಲಿಯನ್ ದುಡ್ಡು ದೋಚಿದ ದಂಪತಿ ಈಗ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

ಈ ಪ್ರಸಂಗ ಬಹಳ ರೋಚಕವಾಗಿದ್ದು, ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ. ಕಳೆದ ವರ್ಷ ತನ್ನ ಕಾರು ರಸ್ತೆಯಲ್ಲಿ ಗ್ಯಾಸ್ ಖಾಲಿಯಾಗಿ ನಿಂತಿದ್ದಾಗ ಜಾನಿ ಬಾಬಿಟ್ ಎಂಬಾತ 20 ಡಾಲರ್ ಗಳನ್ನು ನೀಡಿ ಸಹಾಯ ಮಾಡಿದ್ದ.

ಮನೆಮಠವಿಲ್ಲದ ಆ ಮಾಜಿ ಸೈನಿಕನಿಗೆ ಸಹಾಯ ಮಾಡಿ ಎಂದು ಕ್ಯಾಟಲಿನ್ ಮೆಕ್ ಕ್ಲ್ಯೂರ್ ಮತ್ತು ಆಕೆಯ ಪ್ರಿಯಕರ ಮಾರ್ಕ್ ಡಿಅಮಿಕೋ ಇಬ್ಬರೂ ಗೋ ಫಂಡ್ ಮೀ ವೆಬ್ ಸೈಟ್ ನಲ್ಲಿ ಅಭಿಯಾನ ಪ್ರಾರಂಭಿಸಿ ಪ್ರಚುರಪಡಿಸಿದ್ದರು.

ಜಾನಿಗೆ ಅಪಾರ್ಟ್ ಮೆಂಟ್ ಒಂದನ್ನು ಬಾಡಿಗೆಗೆ ಪಡೆದು ಜೊತೆಗೆ ಕಾರು ಒಂದನ್ನು ಖರೀದಿಸಿ ನೆಮ್ಮದಿಯ ಬದುಕು ನಡೆಸಲು 10000 ಸಾವಿರ ಡಾಲರ್ ಅವಶ್ಯಕತೆ ಇದೆ. ಸಹಾಯ ಮಾಡಿ ಎಂದು ವೆಬ್ ಸೈಟ್ ನಲ್ಲಿ ಮನವಿ ಮಾಡಲಾಗಿತ್ತು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸುಮಾರು 4 ಲಕ್ಷ ಡಾಲರ್ ಸಂಗ್ರಹವಾಗಿತ್ತು.

ಗಮ್ಮತ್ತೆಂದರೆ ಈ ದುಡ್ಡಲ್ಲಿ ಸಿಂಹಪಾಲನ್ನು ನುಂಗಿ ಈ ಮಹಿಳೆ ಮತ್ತಾಕೆಯ ಪ್ರಿಯಕರ ನುಂಗಿ ನೀರು ಕುಡಿದಿದ್ದಾರೆಂದು ತಿಳಿದದ್ದು ಜಾನಿ ದೂರು ನೀಡಿದಾಗಲೇ. ಆತನ ಕೈಗೆ ಈ ಇಬ್ಬರೂ 75000 ಡಾಲರ್ ನೀಡಿದ್ದರು. ಆಗ ಈತನಿಗೇನೂ ಅನುಮಾನ ಬಂದಿಲ್ಲ. ಆರಾಮದಲ್ಲೇ ಇದ್ದ.

ಆದರೆ ಯಾವಾಗ ಈ ಜೋಡಿ ಐಷಾರಾಮಿ ಬಿಎಂಡಬ್ಲ್ಯೂ ಕಾರು ತೆಗೆದುಕೊಂಡು ಊರೂರು ಸುತ್ತಿ ಮಜಾ ಉಡಾಯಿಸಲು ಪ್ರಾರಂಭಿಸಿದರೋ ಅನುಮಾನ ಕಾಡಿ ದೂರು ನೀಡಿದ್ದಾನೆ. ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಿಗೆ ಬಂದಿದ್ದು, ಕೋರ್ಟ್ ಮೂವರನ್ನೂ ಅಪರಾಧಿಗಳೆಂದು ಘೋಷಿಸಿದೆ.

ಹೀಗಾಗಿ ಆನ್ ಲೈನ್ ಸಹಾಯದ ಮನವಿಗೆ ಮನಕರಗಿ ಓಗೊಡುವ ಮುನ್ನ ನೂರು ಬಾರಿ ಪರೀಕ್ಷಿಸಿ ನೀಡುವುದು ಒಳಿತು ಎಂಬುದಕ್ಕೆ ಇದೊಂದು ಅದ್ಭುತ ನಿದರ್ಶನವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...