alex Certify
ಕನ್ನಡ ದುನಿಯಾ       Mobile App
       

Kannada Duniya

ಧಾರ್ಮಿಕ ವ್ಯಕ್ತಿಗಳಿಗೆ ಹೆಚ್ಚಿರುತ್ತೆ ಪೋರ್ನ್ ನೋಡುವ ಚಟ?

porn_s_032714100009

ಆನ್ಲೈನ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಶ್ಚಾತ್ಯ ದೇಶದಲ್ಲಿ ಈ ಹಿಂದೆ ನಡೆದ ಅಧ್ಯಯನವೊಂದು ಆಶ್ಚರ್ಯಕರ ವಿಷಯವನ್ನು ಹೊರಹಾಕಿದೆ. ಧಾರ್ಮಿಕ ವ್ಯಕ್ತಿಗಳು ಹೆಚ್ಚಾಗಿ ಪೋರ್ನೋಗ್ರಫಿ ವ್ಯಸನಕ್ಕೆ ತುತ್ತಾಗಿರುತ್ತಾರೆಂದು ಅಧ್ಯಯನ ಹೇಳಿದೆ. ಇಂಟರ್ ನೆಟ್ ನಲ್ಲಿ ಅಶ್ಲೀಲ ಚಿತ್ರ ನೋಡುವ ಚಟ ಸಾಮಾನ್ಯರಿಗಿಂತ ಅವರಲ್ಲಿ ಹೆಚ್ಚಿರುತ್ತದೆ ಎಂದು ಅಧ್ಯಯನ ಹೇಳಿದೆ.

ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾನಿಲಯ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿ ಮತ್ತು ಮುಖ್ಯ ಲೇಖಕ ಜೋಶುವಾ ಗ್ರಬ್ ಈ ಬಗ್ಗೆ ಮೂರು ವರ್ಷದ ಹಿಂದೆ ಅಧ್ಯಯನ ನಡೆಸಿದ್ದು, ಈ ಹೇಳಿಕೆ ನೀಡಿದ್ದಾರೆ. ಅಧ್ಯಯನದಿಂದ ಬಂದ ಫಲಿತಾಂಶ ಆತಂಕ ಹುಟ್ಟಿಸುವಂತಿದೆ. ಇದು ನೈತಿಕ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ

ಲೇಖಕ ಗ್ರಬ್ ನಂಬಿಕೆ, ಧಾರ್ಮಿಕ ಪದ್ಧತಿ, ಆನ್ಲೈನ್ ನಲ್ಲಿ ಅಶ್ಲೀಲ ಚಿತ್ರ ನೋಡುವ ಚಟ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮೊದಲ ಸಮೀಕ್ಷೆಯಲ್ಲಿ ಅಮೆರಿಕಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ 331 ಪದವೀಧರರು ಪಾಲ್ಗೊಂಡಿದ್ದರು. ಎರಡನೇ ಸಮೀಕ್ಷೆಯಲ್ಲಿ ಧಾರ್ಮಿಕ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ 97 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೂರನೇ ಹಂತದಲ್ಲಿ 208 ವಯಸ್ಕರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಸಮೀಕ್ಷೆ ಪ್ರಕಾರ ಧಾರ್ಮಿಕ ವಿಚಾರಕ್ಕೂ ಪೋರ್ನ್ ನೋಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಧಾರ್ಮಿಕ ಅಧ್ಯಯನ ನಡೆಸುತ್ತಿರುವ ಹಲವು ವಿದ್ಯಾರ್ಥಿಗಳಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುವ ಚಟ ಜಾಸ್ತಿ ಇರುತ್ತದೆ. ಅವರು ಉಳಿದವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡ್ತಾರೆಂದು ಅಧ್ಯಯನ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...