alex Certify
ಕನ್ನಡ ದುನಿಯಾ       Mobile App
       

Kannada Duniya

ಮನಕಲಕುತ್ತೆ ಪುಟ್ಟ ಕಂದನ ಈ ಫೋಟೋ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪುಟ್ಟ ಕಂದನ ಫೋಟೋ ಒಂದು ಎಲ್ಲರ ಕಣ್ಣಂಚನ್ನು ತೇವ ಮಾಡಿದೆ. ನಿರಾಶ್ರಿತರ ಶಿಬಿರದಲ್ಲಿ ಈ ಫೋಟೋ ತೆಗೆಯಲಾಗಿದ್ದು, ಇದಕ್ಕೆ ಭಾರಿ ಕಮೆಂಟ್ ಬರುತ್ತಿವೆ.

ವಿಶ್ವದಲ್ಲಿ ನಿರಾಶ್ರಿತರ ಸಮಸ್ಯೆ ತೀವ್ರವಾಗಿದ್ದು, ಜೀವಭಯದಲ್ಲಿ ದೇಶ ತೊರೆದವರು ಇಂದು ಅನಾಥರಂತೆ ಬದುಕಬೇಕಾಗಿ ಬಂದಿದೆ. ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ್ದ ಪತ್ರಕರ್ತರೊಬ್ಬರು ತೆಗೆದ ಈ ಫೋಟೋ ವೈರಲ್ ಆಗಿರೋದಕ್ಕೆ ಕಾರಣವೂ ಇಲ್ಲದಿಲ್ಲ.

ವಸತಿ, ಆಹಾರ ಇಲ್ಲದೆ ನಿರಾಶ್ರಿತರು ಬದುಕುತ್ತಿದ್ದು, ಕೆಲ ದೇಶಗಳು ನೀಡುತ್ತಿರುವ ಅಲ್ಪಸ್ವಲ್ಪ ನೆರವು ಇವರಿಗೆ ಆಸರೆಯಾಗಿದೆ. ನಿರಾಶ್ರಿತರ ಶಿಬಿರಕ್ಕೆ ಹೋದ ಪತ್ರಕರ್ತ, ಪುಟ್ಟ ಬಾಲಕಿಯ ಫೋಟೋ ತೆಗೆಯಲು ಮುಂದಾದಾಗ ಆಕೆ ತನ್ನ ಕೈಯಲ್ಲಿದ್ದ ಆಹಾರವನ್ನೇ ಹಂಚಿ ತಿನ್ನುವಂತೆ ಆ ಪತ್ರಕರ್ತನಿಗೆ ನೀಡಲು ಮುಂದಾಗಿದ್ದಾಳೆ.

ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು, ಆ ಪುಟ್ಟ ಬಾಲಕಿಗೆ ಇರುವ ಮಾನವೀಯತೆ ನಮಗಿಲ್ಲವಾಯಿತಲ್ಲ ಎಂದು ಪರಿತಪಿಸಿದ್ದಾರೆ. ಮತ್ತೆ ಕೆಲವರು ಆ ದೇವರೇ ಪುಟ್ಟ ಬಾಲಕಿಯ ರೂಪದಲ್ಲಿ ಮಾನವೀಯತೆ ಪರೀಕ್ಷೆಗಾಗಿ ಭೂಮಿಗೆ ಬಂದಿದ್ದಾನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...