alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ಫ್ರಿಡ್ಜ್ ಸ್ಪೋಟಗೊಂಡಿರುವ ವಿಡಿಯೋ

ಮೊಬೈಲ್ ಫೋನ್ ಸ್ಫೋಟಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಆದ್ರೆ ಚೀನಾದಲ್ಲಿ ನಡೆದಿರೋ ಈ ಘಟನೆ ನಿಜಕ್ಕೂ ಎಲ್ಲರನ್ನು ಬೆಚ್ಚಿಬೀಳಿಸಿದೆ. ಇಂಟರ್ನೆಟ್ ಕೆಫೆ ಒಂದರಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡಿದೆ.

ಭಾರೀ ಶಬ್ಧದೊಂದಿಗೆ ಫ್ರಿಡ್ಜ್ ಸ್ಫೋಟಿಸಿ ಬೆಂಕಿ ಹೊತ್ತಿಕೊಂಡಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಫ್ರಿಡ್ಜ್ ಸಮೀಪದಲ್ಲೇ ಕುಳಿತಿದ್ದ ಗ್ರಾಹಕರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮಾರ್ಚ್ 19ರಂದು ಚೀನಾದ ಪಿಂಗ್ ಡಿಂಗ್ಷನ್ ಎಂಬ ನಗರದಲ್ಲಿ ನಡೆದ ಘಟನೆ ಇದು.

ಕ್ಯಾಶಿಯರ್ ಕೌಂಟರ್ ಬಳಿ ಗ್ರಾಹಕ ಆರಾಮಾಗಿ ನಡೆದುಕೊಂಡು ಬರುತ್ತಿದ್ದ. ಈ ವೇಳೆ ದಿಢೀರನೆ ಫ್ರಿಡ್ಜ್ ಸ್ಫೋಟಗೊಂಡಿದೆ. ಒಳಗಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...