alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಹೆಚ್ಚಾಗ್ತಿದೆ ವೃದ್ಧರ ಆತ್ಮಹತ್ಯೆ

ಪ್ರೇಮ ವಿಫಲತೆ, ಸಾಲ, ಆರ್ಥಿಕ ಸಂಕಷ್ಟ ಹೀಗೆ ಅನೇಕ ಕಾರಣಗಳಿಗೆ ಜನರು ಆತ್ಮಹತ್ಯೆಗೆ ಶರಣಾಗ್ತಾರೆ. ಭಾರತದಲ್ಲಿ ವಯಸ್ಕರು ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ವಿದ್ಯಾಭ್ಯಾಸ, ಪ್ರೇಮ ಹಾಗೂ ಸಾಲ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದ್ರೆ ಸಿಂಗಾಪುರದ ಅಂಕಿ-ಅಂಶ ಬೇರೆಯಿದೆ.

ಸಿಂಗಾಪುರದಲ್ಲಿ ವೃದ್ಧರ ಆತ್ಮಹತ್ಯೆ ಪ್ರಕರಣ ಹೆಚ್ಚಾಗ್ತಿದೆ. ಹಿಂದಿನ ವರ್ಷ ದಾಖಲೆ ಪ್ರಮಾಣದಲ್ಲಿ ವೃದ್ಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ ಒ ಎಸ್ ಸಂಘಟನೆ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಕುಟುಂಬಕ್ಕೆ ಹೊರೆಯಾಗುತ್ತೇವೆಂಬ ಭಯ, ದೈಹಿಕ ಅಂಗವೈಕಲ್ಯ. ಮಾನಸಿಕ ಅಸ್ವಸ್ಥತೆ ವೃದ್ಧರನ್ನು ಕಾಡ್ತಿರುವ ಪ್ರಮುಖ ಸವಾಲಾಗಿದೆ ಎಂದು ಎಸ್ ಒ ಎಸ್ ಸಂಘಟನೆ ಹೇಳಿದೆ.

ಜನನ ಪ್ರಮಾಣದಲ್ಲಿ ಇಳಿಕೆ ಹಾಗೂ ವೃದ್ಧರ ಜೀವಿತಾವಧಿಯಲ್ಲಿ ಏರಿಕೆಯಾಗಿರುವುದರಿಂದ ಸಮೃದ್ಧ ಸಿಂಗಾಪುರದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗ್ತಿದೆ. ಎಸ್ಒಎಸ್ ವೆಬ್ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ 2017 ರಲ್ಲಿ 60 ವರ್ಷಕ್ಕಿಂದ ಮೇಲ್ಪಟ್ಟ ಸುಮಾರು 129 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...