alex Certify
ಕನ್ನಡ ದುನಿಯಾ       Mobile App
       

Kannada Duniya

ಸೌಂದರ್ಯವೇ ಮುಳುವಾಗಿದೆ ಈ ಸುಂದರಿಗೆ…!

ಸುಂದರವಾಗಿರೋದು ಯಾರಿಗೆ ಇಷ್ಟ ಇಲ್ಲ ಹೇಳಿ. ಹುಡುಗಿಯರಂತೂ ಎಲ್ಲರಿಗಿಂತ ಸುಂದರವಾಗಿರಬೇಕು, ಆಕರ್ಷಿತವಾಗಿರಬೇಕೆಂದು ಕನಸು ಕಾಣ್ತಾರೆ. ಆದ್ರೆ ಅತೀ ಸುಂದರತೆ ಒಮ್ಮೊಮ್ಮೆ ಅವರಿಗೆ ಮುಳುವಾಗಬಹುದು. ಇದಕ್ಕೆ ಈ ಬಾರ್ಬಿ ಡಾಲ್ ಉತ್ತಮ ಉದಾಹರಣೆ.

ಬಾರ್ಬಿ ಡಾಲ್ ನಂತೆ ಕಾಣುವ ಇವಳು ನಾಟಿಂಗ್ಹ್ಯಾಮ್ಷೈರ್ ನಲ್ಲಿ ವಾಸಿಸುವ ಹುಡುಗಿ. ಹನ್ನಾ ಗ್ರೆಗೊರಿ ಹೆಸರಿನ ಈಕೆಗೆ ಸೌಂದರ್ಯವೇ ಮುಳುವಾಗಿದೆ. ಬಾರ್ಬಿ ಡಾಲ್ ನಂತೆ ಕಾಣುವುದು ಈಕೆಗೆ ಇಷ್ಟವಂತೆ. ಆದ್ರೆ ಜನರ ಮಾತುಗಳು, ನಡವಳಿಕೆ ಈಕೆಗೆ ಹಿಂಸೆ ನೀಡುತ್ತಿದೆಯಂತೆ.

ಹನ್ನಾ ಬಾರ್ಬಿ ಡಾಲ್ ನಂತೆ ಕಾಣುತ್ತಾಳೆಂಬ ಕಾರಣಕ್ಕೆ ಯಾವ ಹುಡುಗರೂ ಆಕೆ ಹತ್ತಿರ ಬರುವುದಿಲ್ಲವಂತೆ. ಹಾಗಾಗಿ ಆಕೆಗೆ ಬಾಯ್ ಫ್ರೆಂಡ್ ಇಲ್ಲವಂತೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫಾಲೋವರ್ಸ್ ಗಳಿದ್ದಾರೆ.

ಬಾಯ್ ಫ್ರೆಂಡ್ ಇರಲಿ, ಮನೆಯವರೇ ಈಕೆ ಜೊತೆ ಹೊರಗೆ ಬರುವುದಿಲ್ಲವಂತೆ. ಈಕೆ ಮನೆಯಿಂದ ಹೊರ ಬಿದ್ದರೆ ಜನ ವಿಚಿತ್ರವಾಗಿ ಕಮೆಂಟ್ ಮಾಡ್ತಾರಂತೆ. ಕಾಲೇಜಿನ ಮೊದಲ ದಿನ ಈಕೆಯನ್ನು ಯಾರೂ ಮಾತಾಡಿಸಿಯೇ ಇರಲಿಲ್ಲವಂತೆ. ಇದು ಹನ್ನಾ ದುಃಖಕ್ಕೆ ಕಾರಣವಾಗಿದೆ.

ಬಾಬಿ ಡಾಲ್ ನಂತೆ ಕಾಣಲು ಈಕೆ ಪಿಂಕ್ ಡ್ರೆಸ್ ತೊಡ್ತಾಳೆ. ಹಳೆ ಡ್ರೆಸ್ ಮಾರಿ ಹೊಸ ಡ್ರೆಸ್ ಖರೀದಿಸ್ತಾಳೆ ಹನ್ನಾ. ಬೆಳಿಗ್ಗೆ ಬೇಗ ಏಳುವ ಅನಿವಾರ್ಯತೆ ಕೂಡ ಇದೆ. ಈಕೆ ಬಾರ್ಬಿ ಡಾಲ್ ನಂತೆ ಸಿದ್ಧಳಾಗಬೇಕೆಂದ್ರೆ 90 ನಿಮಿಷ ಬೇಕಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...