alex Certify
ಕನ್ನಡ ದುನಿಯಾ       Mobile App
       

Kannada Duniya

ಧೂಳಿನ ದೆವ್ವದ ಗಾಳಿ ನೋಡಿದ್ದೀರಾ..?

china air

ಮಳೆಗಾಲದ ಆರಂಭದಲ್ಲಿ ಗುಡುಗು ಸಹಿತ ಭಾರೀ ಮಳೆ, ಗಾಳಿ ಬೀಸಿದ ಸಂದರ್ಭದಲ್ಲಿ ಮನೆಯ ಛಾವಣಿ ಹಾರಿ ಹೋದ ಬಗ್ಗೆ ಕೇಳಿರುತ್ತೀರಿ. ಕೆಲವೊಮ್ಮೆ ಜೋರಾಗಿ ಗಾಳಿ ಬೀಸಿದಾಗ, ಭಾರವಾದ ವಸ್ತುಗಳೂ ಹಾರಿ ಹೋಗುತ್ತವೆ.

ಭಾರೀ ಪ್ರಮಾಣದಲ್ಲಿ ಬೀಸಿದ ಸುಳಿಗಾಳಿಗೆ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕಿಯೊಬ್ಬಳು, ಹಾರಿಹೋದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಉತ್ತರ ಪ್ರಾಂತ್ಯದಲ್ಲಿರುವ ಯುವಂಕ್ವಾನ್ ನಗರದ ಶಾಲೆಯೊಂದರ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದ ಸುಳಿಗಾಳಿಯೊಂದು ಬೀಸಿದೆ. ಈ ಗಾಳಿಯ ಸುಳಿಗೆ ಸಿಲುಕಿದ ಬಾಲಕಿಯೊಬ್ಬಳನ್ನು ಎತ್ತಿಕೊಂಡ ಹೋಗಿದ್ದು. ಸುಮಾರು 5 ಮೀಟರ್ ಎತ್ತರಕ್ಕೆ ಹಾರಿ ಬಾಲಕಿ ಬಿದ್ದಿದ್ದಾಳೆ. ಆಕೆಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಗಾಳಿ ಬೀಸಿದ ಬೆನ್ನಲ್ಲೇ ಮತ್ತೊಂದು ಸುಳಿಗಾಳಿ ಬೀಸಿದ್ದು, ಶಿಕ್ಷಕರು, ಮಕ್ಕಳೆಲ್ಲಾ ನೆಲದ ಮೇಲೆ ಮಲಗುವಂತೆ ಸೂಚಿಸಿದ್ದಾರೆ. ಸುಳಿಗಾಳಿಯ ರಭಸಕ್ಕೆ ಅಲ್ಲಿದ್ದ ವಸ್ತುಗಳೆಲ್ಲಾ ಹಾರಿವೆ. ಇದೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...