alex Certify
ಕನ್ನಡ ದುನಿಯಾ       Mobile App
       

Kannada Duniya

`ಇಲಿ ಕೆಫೆ’ ವಿಶೇಷವೇನು ಗೊತ್ತಾ…?

ratcafe_201774_12715_04_07_2017

ಸ್ಯಾನ್ ಫ್ರಾನ್ಸಿಸ್ಕೋದಲ್ಲೊಂದು ವಿಭಿನ್ನ ಕೆಫೆ ಓಪನ್ ಆಗಿದೆ. ಈ ಕೆಫೆಯಲ್ಲಿ ಇಲಿ ಜೊತೆ ಕುಳಿತು ನೀವು ಟೀ, ಕಾಫಿ ಕುಡಿಯಬಹುದಾಗಿದೆ. ಈ ಕೆಫೆಯ ಹೆಸರು ದಿ ರ್ಯಾಟ್ ಕೆಫೆ. ಇಲಿ ಪ್ರೇಮಿಗಳನ್ನು ಈ ಕೆಫೆ ಆಕರ್ಷಿಸುತ್ತಿದೆ. ಈ ಕೆಫೆಯಲ್ಲಿ ಇಲಿಗಳ ಜೊತೆ ನೀವು ಸ್ನೇಹ ಬೆಳೆಸಬಹುದಾಗಿದೆ.

ಈ ಕೆಫೆಯಲ್ಲಿ ಒಂದು ಕಪ್ ಕಾಫಿ ಬೆಲೆ 50 ಅಮೆರಿಕನ್ ಡಾಲರ್. ಕಾಫಿ ಕುಡಿದ ನಂತ್ರ ಇಲಿ ಜೊತೆ ಸ್ನೇಹ ಬೆಳೆಸಬಯಸಿದ್ದರೆ ಇಲಿಯನ್ನು ನೀವು ಮನೆಗೆ ತರಬಹುದು. ಇಲಿಯನ್ನು ಜನರು ದತ್ತು ಪಡೆಯಲಿ ಎನ್ನುವ ಉದ್ದೇಶದಿಂದ ಈ ಕೆಫೆ ತೆರೆಯಲಾಗಿದೆ. ಕ್ಯಾಲಿಫೋರ್ನಿಯಾದ ಸಾಮಾಜಿಕ ಸಂಸ್ಥೆ Rattie Ratz ಈ ಕೆಫೆ ಓಪನ್ ಮಾಡಿದೆ.

ಜುಲೈ ಒಂದರಿಂದ ಈ ಕೆಫೆ ಶುರುವಾಗಿದ್ದು ಜುಲೈ 8ರವರೆಗೆ ಮಾತ್ರ ತೆರೆದಿರಲಿದೆ. 8 ದಿನಗಳ ಕಾಲ ತೆರೆದಿರುವ ಈ ಕೆಫೆಯ ಟಿಕೆಟ್ ಒಂದು ಗಂಟೆಯಲ್ಲಿ ಮಾರಾಟವಾಗಿದೆಯಂತೆ. ಈ ಸಂಸ್ಥೆ ಬಳಿ 250ಕ್ಕೂ ಹೆಚ್ಚು ಸ್ಥಳೀಯ ಸಾಕಿದ ಇಲಿಗಳಿವೆ. 1998ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...