alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹಾವಿನ ಮೇಲೆ ಇಲಿ ಅಟ್ಯಾಕ್ ಮಾಡಿರುವ ವಿಡಿಯೋ

ನಾವು ಹಲವು ಪ್ರಾಣಿಗಳು ಸೆಣೆಸಾಡುವ ವಿಡಿಯೋ ನೋಡಿದ್ದೇವೆ. ಆದ್ರೆ, ಚೀನಾದಲ್ಲಿ ಹಾವು ಹಾಗೂ ಇಲಿ ಫೈಟ್​ ನಡೆಸಿವೆ. ಹಾಗಿದ್ರೆ, ಇವುಗಳ ನಡುವಿನ ಫೈಟ್​​ನಲ್ಲಿ ಯಾರು ಗೆದ್ದರು ಎಂಬ ಕುತೂಹಲ ಮೂಡೋದು ಸಹಜ.

ಚೀನಾದ ಪುನಿಂಗ್​ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಹಾವು ಹಾಗೂ ಇಲಿ ಕಾದಾಟ ನಡೆಸಿದ್ದು, ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುವುದೆಂದರೆ ಇಲಿ, ಹಾವಿನ ಮೇಲೆ ಅಟ್ಯಾಕ್​ ಮಾಡುತ್ತೆ. ಹಾವು, ಇಲಿಯಿಂದ ತಪ್ಪಿಸಿಕೊಳ್ಳಲು ಹೆಣಗಾಟ ನಡೆಸುತ್ತೆ.

ಇಲಿ, ಹಾವಿನ ತಲೆಯನ್ನು ಹಿಡಿದು ಗಿಡದಲ್ಲಿ ನುಸುಳುತ್ತದೆ. ಗಾಯಾಳು ಹಾವು, ಬದುಕಿದ್ರೆ ಸಾಕಪ್ಪ ಎಂದು ಹೊರ ಬರುತ್ತದೆ. ಆದ್ರೂ ಇಲಿ ಬಿಡದೆ ಮತ್ತೆ ಮತ್ತೆ ಅದರ ಮೇಲೆ ಆಕ್ರಮಣ ನಡೆಸುತ್ತದೆ. ಕಳೆದ ವರ್ಷವೂ ಇಂತಹದ್ದೆ ವಿಡಿಯೋ ವೈರಲ್​ ಆಗಿತ್ತು. ಆಗ ಹಾವು, ಇಲಿಗೆ ಕಾಟ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...