alex Certify
ಕನ್ನಡ ದುನಿಯಾ       Mobile App
       

Kannada Duniya

50 ಡಾಲರ್ ಗೆ ಮಾರಾಟವಾಗಿತ್ತು ದುಬಾರಿ ವಯಲಿನ್…!

ಅಮೆರಿಕಾದ ಮೆಸಾಚುಸೆಟ್ಸ್ ನಲ್ಲಿ ಕದ್ದ ವಯಲಿನ್ ಅನ್ನು ಗಿರವಿ ಅಂಗಡಿಗೆ ಮಾರಾಟ ಮಾಡಿದ ಯುವತಿಯೊಬ್ಬಳು 50 ಡಾಲರ್ ಪಡೆದುಕೊಂಡಿದ್ದಾಳೆ. ಅಸಲಿಗೆ ಈ ವಯಲಿನ್ ಬೆಲೆ ಎಷ್ಟು ಎಂದು ನೀವು ತಿಳಿದ್ರೆ ಗಾಬರಿ ಬೀಳದೆ ಇರಿರಿ. ಎಸ್, ಈ ವಯಲಿನ್ ಬೆಲೆ 2 ಲಕ್ಷ ಡಾಲರ್ ಅಂದ್ರೆ ಸುಮಾರು 1,37,25,000 ರೂಪಾಯಿ.

ಅಮೆರಿಕಾದ ಗಿರವಿ ಅಂಗಡಿಯಲ್ಲಿ ಯುವತಿಯೊಬ್ಬಳು ಇದನ್ನು ಮಾರಾಟ ಮಾಡಿದ್ದಾಳೆ. ಈ ವಯಲಿನ್ ಪಡೆದ ಅಂಗಡಿಯ ಮಾಲಿಕ ಸಹ ಅವಳಿಗೆ 50 ಡಾಲರ್ ನೀಡಿದ್ದಾನೆ.

ಗಿರವಿ ಅಂಗಡಿಯವರು ದಿನಂಪ್ರತಿ ತಮ್ಮ ಅಂಗಡಿಯಲ್ಲಿನ ಗಿರವಿ ಸಾಮಾನುಗಳ ವರದಿಯನ್ನು ತೆರಿಗೆ ಇಲಾಖೆ ಹಾಗೂ ಪೊಲೀಸರಿಗೆ ನೀಡುತ್ತಾರೆ. ಇದರ ಅನ್ವಯ ಪೊಲೀಸರು ಈ ವಯಲಿನ್ ತಪಾಸಣೆ ನಡೆಸಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಈ ವಯಲಿನ್ ಬೆಲೆ ತಿಳಿಸಿದ್ದಾರೆ. ಆಗ ಅಂಗಡಿ ಮಾಲೀಕ ಈಗ ಚೀನಾ ವಸ್ತುಗಳು ಹೆಚ್ಚಾಗಿದ್ದು, ಯಾವುದಕ್ಕೆ ಎಷ್ಟು ಬೆಲೆ ಎಂದು ತಿಳಿಯುತ್ತಿಲ್ಲ ಎಂದು ತಿಳಿಸಿದ್ದಾನೆ. ಪೊಲೀಸರಲ್ಲಿ ವಯಲಿನ್ ಕಳವು ಆದ ಬಗ್ಗೆ ಮೊದಲೇ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ, ದುಬಾರಿ ವಯಲಿನ್ ಈಗ ಮಾಲೀಕರ ಕೈ ಸೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...