alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ತೆಯಾಯ್ತು ಅಪರೂಪದ 2 ತಲೆಯ ಹಾವು

thc-1

ಕ್ರವಾರ್ಸ್ಕೋ: ಕಳೆದ ಕೆಲವು ವರ್ಷಗಳಿಂದೀಚೆಗೆ 2 ತಲೆಯ ಹಾವಿನ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಕೆಲವರು ಇರುವ ಕೆಲಸ ಬಿಟ್ಟು ಹಾವು ಹಿಡಿಯಲು ಮುಂದಾಗಿದ್ದು ವರದಿಯಾಗಿತ್ತು.

2 ತಲೆಯ ಹಾವು ಮಾರಾಟದ ಅನೇಕ ಪ್ರಕರಣಗಳನ್ನು ಪೊಲೀಸರು ಬಯಲಿಗೆಳೆದು ಹಲವರನ್ನು ಬಂಧಿಸಿದ್ದರು. 2 ತಲೆಯ ಹಾವು ಎಂದು ಹೇಳುತ್ತಿದ್ದ ಹಾವಿಗೆ 2 ತಲೆ ಇರಲಿಲ್ಲ. ತಲೆ ಮತ್ತು ಬಾಲದ ಭಾಗ ಒಂದೇ ರೀತಿ ಇದ್ದ ಕಾರಣ 2 ತಲೆಯ ಹಾವೆಂದು ಕರೆಯಲಾಗುತ್ತಿತ್ತು. ಇದೆಲ್ಲಾ ಇರಲಿ, ಕ್ರೊವೇಷಿಯಾದಲ್ಲಿ ಅಪರೂಪದ 2 ತಲೆಯ ಹಾವೊಂದು ಪತ್ತೆಯಾಗಿದೆ.

ಕ್ರವಾರ್ಸ್ಕೋದ ಜೋಸೆಫ್ ವ್ರಾನಿಕ್ ಅವರ ತೋಟದಲ್ಲಿ ಅಪರೂಪದಲ್ಲಿಯೇ ಅಪರೂಪದ 2 ತಲೆಯ ಹಾವು ಕಂಡು ಬಂದಿದೆ. ಇದನ್ನು ಮೊದಲಿಗೆ ಕಂಡ ತನಗೆ ಅಚ್ಚರಿಯಾಯಿತು ಎಂದು ವ್ರಾನಿಕ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...