alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಮೊತ್ತಕ್ಕೆ ಹರಾಜಾಗಿದೆ ಗಾಂಧೀಜಿ ಸಹಿಯುಳ್ಳ ಅಪರೂಪದ ಫೋಟೋ

ಮಹಾತ್ಮಾ ಗಾಂಧೀಜಿ ಹಾಗೂ ಮದನ್ ಮೋಹನ್ ಮಾಳವಿಯಾ ಜೊತೆಯಾಗಿ ನಡೆದುಕೊಂಡು ಹೋಗ್ತಿರೋ ಅಪರೂಪದ ಫೋಟೋ ಒಂದನ್ನು ಅಮೆರಿಕದಲ್ಲಿ ಹರಾಜು ಹಾಕಲಾಗಿದೆ. ನಿರೀಕ್ಷೆಗಿಂತ್ಲೂ 4 ಪಟ್ಟು ಅಧಿಕ ಮೊತ್ತಕ್ಕೆ ಇದು ಹರಾಜಾಗಿದೆ.

41,806 ಡಾಲರ್ ಕೊಟ್ಟು ಈ ಫೋಟೋವನ್ನು ಖರೀದಿಸಲಾಗಿದೆ. 1931ರ ಸೆಪ್ಟೆಂಬರ್ ನಲ್ಲಿ ಲಂಡನ್ ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದ ವೇಳೆ  ಕ್ಲಿಕ್ಕಿಸಿದ ಫೋಟೋ ಅದು. ಅದರ ಮೇಲೆ ಫೌಂಟೇನ್ ಪೆನ್ ನಿಂದ ಎಂ.ಕೆ. ಗಾಂಧಿ ಎಂದು ಸಹಿ ಕೂಡ ಮಾಡಲಾಗಿದೆ.

ಆ ಸಮಯದಲ್ಲಿ ಗಾಂಧೀಜಿಗೆ ಬಲ ಹೆಬ್ಬೆರಳು ನೋವಿತ್ತು. ಹಾಗಾಗಿ ಅವರು ಎಡಗೈನಲ್ಲಿ ಬರೆಯುತ್ತಿದ್ದರಂತೆ. 1931ರ ಡಿಸೆಂಬರ್ ವೇಳೆಗೆ ಅವರಿಗೆ ನೋವು ನಿವಾರಣೆಯಾಗಿತ್ತು. ಈ ಫೋಟೋ 10,000 ಡಾಲರ್ ಗೆ ಬಿಕರಿಯಾಗಬಹುದೆಂಬ ನಿರೀಕ್ಷೆ ಇತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...