alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿದೆ ನೋಡಿ 3.6 ಮಿಲಿಯನ್ ವರ್ಷಗಳಷ್ಟು ಹಳೆಯ ಅಸ್ಥಿಪಂಜರ….

ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಸುಮಾರು 3.6 ಮಿಲಿಯನ್ ವರ್ಷಗಳಷ್ಟು ಹಳೆಯ ಮಾನವನ ಅಸ್ಥಿಪಂಜರವನ್ನು ಪತ್ತೆ ಮಾಡಿದ್ದಾರೆ. ಈ ಪಳೆಯುಳಿಕೆಯನ್ನು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ನಮ್ಮ ಪೂರ್ವಜರು ಯಾವ ರೀತಿ ಇದ್ದರು, ಅವರ ಜೀವನ ಶೈಲಿ ಹೇಗಿತ್ತು ಎಂಬುದನ್ನೆಲ್ಲ ತಿಳಿಯಲು ಈ ಅಸ್ಥಿಪಂಜರ ಸಹಕಾರಿಯಾಗಲಿದೆ. ಅತ್ಯಂತ ದುರ್ಬಲವಾಗಿದ್ದ ಈ ಅಸ್ಥಿಪಂಜರವನ್ನು ಉತ್ಖನನ ಮಾಡಿ, ಶುದ್ಧಗೊಳಿಸಿ, ಪುನರ್ರಚಿಸಿ, ವಿಶ್ಲೇಷಣೆ ಮಾಡಲು ಬರೋಬ್ಬರಿ 20 ವರ್ಷಗಳೇ ಬೇಕಾಯ್ತು ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ.

ಜೊಹಾನ್ಸ್ ಬರ್ಗ್ ನಿಂದ 40 ಕಿಮೀ ದೂರದಲ್ಲಿರುವ ಸ್ಟರ್ಕ್ಫೋಂಟೈನ್ ಗುಹೆಗಳಲ್ಲಿ ಗಣಿಗಾರಿಕೆಗಾಗಿ ಸಿಡಿಮದ್ದುಗಳನ್ನು ಸಿಡಿಸಲಾಗಿತ್ತು. ಆ ಜಾಗದಲ್ಲಿ ಮೊದಲು ಅಸ್ಥಿಪಂಜರದ ಸಣ್ಣ ಸಣ್ಣ ಎಲುಬುಗಳು ಪತ್ತೆಯಾಗಿದ್ದವು. ನಂತರ ವರ್ಷಗಟ್ಟಲೆ ಶ್ರಮಿಸಿ ವಿಜ್ಞಾನಿಗಳು ಪೂರ್ತಿ ಅಸ್ಥಿಪಂಜರವನ್ನು ಶೋಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...