alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಯ ಒಳ ಉಡುಪಿನ ಕಾರಣಕ್ಕೆ ಶಿಕ್ಷೆಯಿಂದ ಪಾರಾದ ಆರೋಪಿ…!

ಇತ್ತೀಚೆಗೆ ನಡೆದ ಅಪರಾಧ ಪ್ರಕರಣವೊಂದು ಅಚ್ಚರಿ ಹುಟ್ಟಿಸಿದೆ. 17 ವರ್ಷದ ಹುಡುಗಿಯೊಬ್ಬಳ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಒಳ ಉಡುಪನ್ನು ಸಾಕ್ಷಿಯಾಗಿ ಪರಿಗಣಿಸಿದೆ. ಒಳ ಉಡುಪು ಸಾಕ್ಷಿಯಾಗಿ ಪರಿಗಣಿಸಿದ ಕೋರ್ಟ್ ಹುಡುಗಿ ಹೊರಿಸಿದ್ದ ಅತ್ಯಾಚಾರ ಆರೋಪವನ್ನು ನಿರಾಕರಿಸಿದೆ.

ಹುಡುಗಿ ಘಟನೆ ವೇಳೆ ಸ್ಟ್ರಿಪ್ಸ್ ಇರುವ ಒಳ ಉಡುಪು ಧರಿಸಿದ್ದಳಂತೆ. ಅದನ್ನು ಬಿಗಿಯಾಗಿ ಕಟ್ಟಿದ್ದರಿಂದ ಅದನ್ನು ತೆಗೆಯಲು ಸಾಧ್ಯವಾಗ್ತಿರಲಿಲ್ಲ. ಹಾಗಾಗಿ ಇದು ಅತ್ಯಾಚಾರವಲ್ಲವೆಂದು ಕೋರ್ಟ್ ಹೇಳಿದೆ. ಘಟನೆ ಐರ್ಲ್ಯಾಂಡ್ ನಲ್ಲಿ ನಡೆದಿದೆ. 17 ವರ್ಷದ ಹುಡುಗಿ 27 ವರ್ಷದ ವ್ಯಕ್ತಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಆರೋಪ ಮಾಡಿದ್ದಳು.

ಸ್ಥಳೀಯ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ವೇಳೆ ಆರೋಪಿ ಪರ ವಕೀಲ ಒಳ ಉಡುಪು ಪರೀಕ್ಷೆ ಮಾಡುವಂತೆ ಹೇಳಿದ್ದರು. ರಿಬ್ಬನ್ ಕಟ್ಟಿದ್ದ ಒಳ ಉಡುಪನ್ನು ಕೋರ್ಟ್ ಹಾಗೂ ತೀರ್ಪುಗಾರರು ಪರೀಕ್ಷಿಸಿದ್ದರು. ನಂತ್ರ ಇದು ಅತ್ಯಾಚಾರವಲ್ಲವೆಂದು ತೀರ್ಪು ನೀಡಿದ್ದಾರೆ. ಇಬ್ಬರ ಮಧ್ಯೆ ಒಪ್ಪಿಗೆ ಮೇರೆಗೆ ಸಂಬಂಧ ಬೆಳೆದಿದೆ ಎಂದು ಕೋರ್ಟ್ ಹೇಳಿದೆ. ಈ ಮಧ್ಯೆ ಕೋರ್ಟ್ ತೀರ್ಪಿಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...